ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಹಾಗೂ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ಕೆಲ ದುಷ್ಕರ್ಮಿಗಳು ಕಳೆದ ಕೆಲ ತಿಂಗಳಿನಿಂದ ತ್ಯಾಜ್ಯ ಎಸೆಯುತ್ತಿದ್ದು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಹೆದ್ದಾರಿ ಬದಿಯಲ್ಲಿ ಹುಲ್ಲು ಕಟಾವು ಮಾಡುವ ವೇಳೆಯಲ್ಲಿ ಕಂಡುಬಂದಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ್ದು ಎಚ್ಚೆತ್ತ ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಲೀಲಾವತಿ ನೇತೃತ್ವದಲ್ಲಿ ಕುಬೆವೂರು ರಾಜ್ಯ ಹೆದ್ದಾರಿ ಬದಿಯ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿ ಅಂಗರಗುಡ್ಡೆ ಬಳಿಯ ತ್ಯಾಜ್ಯವನ್ನು ತೆರವುಗೊಳಿಸುವುದೇ ಅಲ್ಲದೆ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮುಖಾಂತರ ತ್ಯಾಜ್ಯ ಬಿಸಾಡುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗುವುದು ಎಂದರು.
ಪಂಚಾಯತ್ ಪಿಡಿಒ ಪೂರ್ಣಿಮಾ, ಮಾಜೀ ಪಂ. ಸದಸ್ಯ ಶರೀಫ್ ಕಿಲ್ಪಾಡಿ, ಸಿಬ್ಬಂದಿಗಳಾದ ಸುರೇಶ್, ಸಬಿತಾ ಶೆಟ್ಟಿ, ಚೇತನ, ತಾರಾನಾಥ ಶೆಟ್ಟಿಗಾರ್,ಯತೀಶ್ ಕೊಲಕಾಡಿ, ಪ್ರಕಾಶ್, ರಮೇಶ್ ಮತ್ತಿತರರು ಶ್ರಮಧಾನದಲ್ಲಿ ಸಹಕರಿಸಿದರು.
Kshetra Samachara
07/01/2022 09:54 pm