ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದ ಬಳಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಭಾರವಾದ ವಾಹನಗಳು ಸಂಚರಿಸಿ ಕುಸಿದ ಕಿರು ಸೇತುವೆಗೆ ಕಾರ್ಯಕಲ್ಪ ನೀಡಲಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್ ಮುತುವರ್ಜಿಯಿಂದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ವೆಚ್ಚದಲ್ಲಿ ನೂತನ ಕಿರು ಸೇತುವೆ ಕಾಮಗಾರಿ ನಡೆಯಲಿದೆ.
ಕಳೆದ ಮಳೆಗಾಲದಲ್ಲಿ ಕೊಂಕಣ ರೈಲ್ವೆಯ ಭಾರಿ ಗಾತ್ರದ ವಾಹನಗಳು ಸಂಚರಿಸಿ ಸೇತುವೆ ಕುಸಿದು ಹೋಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ನಿಂದ ಕೆರೆಕಾಡು ಪರಿಶಿಷ್ಟ ಕಾಲೋನಿಗೆ ನೇರ ಸಂಪರ್ಕ ರಸ್ತೆಯಾಗಿದ್ದು ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಈ ಪರಿಸರದಲ್ಲಿ ಸೇತುವೆಯನ್ನು ಅವಲಂಬಿಸಿ ತಮ್ಮ ವಹಿವಾಟು ನಡೆಸುತ್ತಿದ್ದಾರೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಶಾಸಕರ ಗಮನ ಸೆಳೆದು ಸೇತುವೆಯ ಅಗತ್ಯವನ್ನು ಮನಗಾಣಿಸಿದ್ದು ತಾತ್ಕಾಲಿಕ ನೆಲೆಯಲ್ಲಿ ಸಿಮೆಂಟ್ ಮೋರಿಯನ್ನು ಅಳವಡಿಸಿ ವಾಹನ ಸಂಚಾರ ಮುಕ್ತಗೊಳಿಸಿದ್ದರು.
ಶುಕ್ರವಾರ ಪಂ. ಸದಸ್ಯ ವಿನೋದ್ ಸಾಲ್ಯಾನ್, ಜಿ. ಪಂ. ಜ್ಯೂನಿಯರ್ ಇಂಜಿನಿಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸೇತುವೆ ಕಾಮಗಾರಿ ಕೂಡಲೇ ಆರಂಭವಾಗಲಿದೆ.
Kshetra Samachara
07/01/2022 03:37 pm