ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು, ಕೆಂಚನಕೆರೆ ತಿರುವಿನಲ್ಲಿ ರಸ್ತೆ ತ್ಯಾಜ್ಯಮಯವಾಗಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಮಳೆಗಾಲದಲ್ಲಿ ಹೆದ್ದಾರಿ ಬದಿಯಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದಿದ್ದ ಕಾರಣ ರಸ್ತೆ ಬದಿಯಲ್ಲಿ ದುಷ್ಕರ್ಮಿಗಳು ಬಿಸಾಡಿದ ತ್ಯಾಜ್ಯ ಕಾಣಿಸುತ್ತಿರಲಿಲ್ಲ. ಆದರೆ ಕಳೆದ ದಿನದ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಹೆದ್ದಾರಿ ಬದಿಯ ಹುಲ್ಲು ಕಟಾವು ಮಾಡಿದ್ದು ರಸ್ತೆಬದಿಯಲ್ಲಿ ತ್ಯಾಜ್ಯ ಸಂಗ್ರಹ ರಾಶಿರಾಶಿ ಕಾಣುತ್ತಿದೆ.
ಅದೇ ರೀತಿ ರಾಜ್ಯ ಹೆದ್ದಾರಿಯ ಎಸ್ ಕೋಡಿ ಪೆಟ್ರೋಲ್ ಬಂಕ್ ಬಳಿ ಕಳೆದ ಕೆಲವು ತಿಂಗಳಿನಿಂದ ಪೈಪ್ ಲೈನ್ ಗೆಂದು ಆಗೆದಿದ್ದ ಹೊಂಡ ಮುಚ್ಚದೆ ಪಾದಚಾರಿಗಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ.
ಮುಲ್ಕಿ ಕಿನ್ನಿಗೋಳಿ ಕಟೀಲು ಬಜ್ಪೆ ಮೂಡಬಿದ್ರೆ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿದ್ದು ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ತೆರವು ಹಾಗೂ ಪೈಪ್ ಲೈನ್ ಗೆ ತೋಡಿದ ಅಪಾಯಕಾರಿ ಚರಂಡಿ ಸರಿಪಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
05/01/2022 04:40 pm