ಸುರತ್ಕಲ್:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪೂರ್ವ ವಾರ್ಡ್ 2 ರ ಕೃಷ್ಣಾಪುರ ಮಠದ ರಸ್ತೆಯನ್ನು ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸುವ ಯೋಜನೆಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಪ್ರಮುಖರಾದ ಹರಿ ಭಟ್, ಶ್ರೀಕಾಂತ್ ಭಟ್, ವಿಶ್ವನಾಥ ಭಟ್, ಮೋನಪ್ಪ ಶೆಟ್ಟಿ, ಗಗನ್, ಶಕ್ತಿ ಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ, ಜಯಂತ್, ಸಹಪ್ರಮುಖ್ ರಾಕೇಶ್ ಬಂಗೇರ, ಸುಧಾಕರ ಪೂಂಜ, ರುಕ್ಮಯ್ಯ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಭರತರಾಜ್ ಕೃಷ್ಣಾಪುರ, ಸಂದೇಶ್ ಶೆಟ್ಟಿ ಸಹಿತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/12/2021 01:49 pm