ಮಣಿಪಾಲ; ಡಿಸಿ ಕಚೇರಿ ಎದುರು ಹಾಕಿರುವ ಸೂಚನಾ ಫಲಕದ ಗೊಂದಲದಿಂದಾಗಿ ಆರ್.ಟಿ.ಒ ಕಚೇರಿ ಬದಲು ಸಾರ್ವಜನಿಕರು ಡಿಸಿ ಕಚೇರಿಗೆ ತೆರಳುತ್ತಿರುವ ಪ್ರಸಂಗ ನಡೆಯುತ್ತಿದೆ. ಮಣಿಪಾಲದ ಡಿಸಿ ಕಚೇರಿಯ ಮುಂಭಾಗದಲ್ಲಿ ಆರ್ ಟಿಓ ಕಚೇರಿಗೆ ಎನ್ನುವ ಸೂಚನಾ ಫಲಕ ಇದೆ.ಆದರೆ ಎದುರುಗಡೆ ವಾಣಿಜ್ಯ ಕಟ್ಟಡ ಇರುವುದರಿಂದ ಆರ್ ಟಿಓ ಕಚೇರಿಯ ರಸ್ತೆ ಕಾಣಿಸುತ್ತಿಲ್ಲ. ಇದರಿಂದ ಗೊಂದಲಕ್ಕೀಡಾಗಿ ಸಾರ್ವಜನಿಕರು ಡಿಸಿ ಕಚೇರಿಗೆ ತೆರಳಿ ವಾಪಸಾಗುವಂತಾಗಿದೆ. ಆದ್ದರಿಂದ ಸೂಕ್ತ ಸೂಚನಾ ಫಲಕ ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
23/12/2021 12:01 pm