ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕಲ್ಲುಗುಂಡಿಮಯ ರಸ್ತೆ, ನಿಲ್ದಾಣವಿದ್ದರೂ ಬಸ್ಸೇ ಇಲ್ಲ!; ಜನರ ಬವಣೆಗೆ ಡೋಂಟ್‌ ಕೇರ್

ಸುಳ್ಯ: ದ.ಕ. ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ-ದಬ್ಬಡ್ಕ ಸಂಪರ್ಕಿಸುವ ತೀರಾ ಹದಗೆಟ್ಟ, ಅತ್ಯಪರೂಪದ ರಸ್ತೆಯಿದು. ದ.ಕ. ಜಿಲ್ಲೆಯ ಕಲ್ಲುಗುಂಡಿ ಮೂಲಕವೇ ಕೊಡಗಿಗೆ ಹೋಗಿ, ಬರಬೇಕಿರುವ ಇಲ್ಲಿನ ಚೆಂಬು, ದಬ್ಬಡ್ಕ ಇತ್ಯಾದಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆ ಎಂಬುದೇ ಇಲ್ಲ. ಇಲ್ಲಿ ಬಸ್‌ ನಿಲ್ದಾಣಗಳಿವೆ. ಆದರೆ, ಬಸ್ಸೇ ಬರೋಲ್ಲ!

1978-79ರಲ್ಲಿ ಕಲ್ಲುಗುಂಡಿ-ದಬ್ಬಡ್ಕ-ಚಟ್ಟಿಮನೆ ರಸ್ತೆಗೆ ಬೋಲ್ಡರ್ಸ್ ಹಾಕುವ ಕಾಮಗಾರಿ ಕೈಗೆತ್ತಿಕೊಂಡು ಡಾಮರೀಕರಣದ ಯೋಜನೆ ಹಾಕಲಾಗಿತ್ತು. ಆ ಪ್ರಯುಕ್ತ ಕಲ್ಲುಗುಂಡಿಯಿಂದ ಆಚೆಗೆ 5 ಕಿ.ಮೀ. ಹಾಗೂ ಚಿಟ್ಟಿಮನೆಯಿಂದ ಈಚೆಗೆ 12 ಕಿ.ಮೀ. ರಸ್ತೆ ಡಾಮರೀಕರಣ ಕಾಮಗಾರಿ ಮುಗಿದಿತ್ತು. ಆದರೆ, ಈ ನಡುವಿನ 10 ಕಿ.ಮೀ. ರಸ್ತೆ ಕಾಮಗಾರಿಯನ್ನೇ ಅಂದು ನಡೆಸದ ಹಿನ್ನೆಲೆಯಲ್ಲಿ ಈ ರಸ್ತೆ ಗತಿ ಅಧೋಗತಿಯಾಗಿದೆ.

1978ರ ಬಳಿಕ ಈ ರಸ್ತೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ಮಾತ್ರ ನೀಡಿದ್ದು, ಈವರೆಗೂ ಕಾಮಗಾರಿ ನಡೆದಿಲ್ಲ. ಈ ರಸ್ತೆಗೆ 2 ಕಡೆ ಕಿರುಸೇತುವೆ ಅಗತ್ಯವಿದ್ದು, ಉಳಿದ ಕಚ್ಚಾ ರಸ್ತೆ ದುರಸ್ತಿ ಮಾಡುವ ಅಗತ್ಯವಿದೆ. ಕೊಡಗಿನ ತಲಕಾವೇರಿಗೂ ಅತಿ ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯೂ ಇದಾಗಿದ್ದು, ಒಂದು ವೇಳೆ ಕಾಮಗಾರಿ ನಡೆದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮೂಲಕ ತಲಕಾವೇರಿಯನ್ನು ಅಲ್ಪಾವಧಿಯಲ್ಲೇ ತಲುಪಬಹುದು.

Edited By : Nagesh Gaonkar
Kshetra Samachara

Kshetra Samachara

22/12/2021 04:38 pm

Cinque Terre

6.02 K

Cinque Terre

0

ಸಂಬಂಧಿತ ಸುದ್ದಿ