ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕಾರ್ನಾಡ್ ಮೀನುಮಾರುಕಟ್ಟೆ ದುರಸ್ತಿಗೆ ಚಾಲನೆ ನೀಡಲಾಗಿದ್ದು ಸುಮಾರು 1.72 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ
ಸದಾ ಜನ ನಿಬಿಡ ಪ್ರದೇಶ ಕಾರ್ನಾಡ್ ಮೀನು ಮಾರುಕಟ್ಟೆ ತೀರಾ ಅಪಾಯದ ಸ್ಥಿತಿಯಲ್ಲಿದ್ದು, ಕುಸಿತ ಭೀತಿ ಎದುರಿಸುತ್ತಿದೆ.ಮೀನು ಮಾರುಕಟ್ಟೆಯ ಒಳಗಿನ ಕೋಣೆಯ ಹೆಂಚು, ಪಕ್ಕಾಸು ಬಿದ್ದಿದ್ದು, ಕೋಣೆಯೂ ಕುಸಿಯುವ ಹಂತದಲ್ಲಿದೆ ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ದುರಸ್ತಿ ಪಡಿಸುವ ಭರವಸೆ ನೀಡಿದ್ದರು.
ಅದರಂತೆ ಸುಮಾರು 1.72 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಕಾಮಗಾರಿ ಆರಂಭವಾಗಿದ್ದು ತಾತ್ಕಾಲಿಕವಾಗಿ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ ಕಟ್ಟಡದ ನೆಲ ಭಾಗ ಕಾಂಕ್ರೀಟಿಕರಣ ಹಾಗೂ ಎದುರು ಭಾಗದಲ್ಲಿ ಮತ್ತಷ್ಟು ಕಾಮಗಾರಿ ನಡೆಯಲಿರುವುದರಿಂದ ಅನುದಾನದ ಕೊರತೆ ಉಂಟಾಗಬಹುದು ಎಂದು ಗುತ್ತಿಗೆದಾರ ವರುಣ್ ಚಿತ್ರಾಪು ತಿಳಿಸಿದ್ದಾರೆ
ಹಳೆಯ ಕಾಲದ ಮೀನು ಮಾರುಕಟ್ಟೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಕಾರ್ನಾಡು ಪೇಟೆ ಬದಿ ಕಾರ್ಯಾಚರಿಸುತ್ತಿರುವುದರಿಂದ ಮುಂದೆ ರಾಜ್ಯ ಹೆದ್ದಾರಿ ಅಗಲೀಕರಣದ ವೇಳೆ ಮೀನು ಮಾರುಕಟ್ಟೆ ಸ್ಥಳಾಂತರಿಸಿ ಸೂಕ್ತ ಜಾಗ ಗುರುತಿಸಿ, ಹೊಸ ಕಟ್ಟಡಕ್ಕೆ ಮುಲ್ಕಿ ನಪಂ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
21/12/2021 06:56 pm