ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಜಾರು:ಮಾದಕ ದ್ರವ್ಯ ವಿರೋಧಿ ಜಾಗೃತಿ ಮಾಸಾಚರಣೆ - 2021

ಬಜಪೆ:ಮಂಗಳೂರು ನಗರ ಪೊಲೀಸ್,ಮಂಗಳೂರು ಉತ್ತರ ಉಪ ವಿಭಾಗ ಪಣಂಬೂರು ಇದರ ವತಿಯಿಂದ ಕೆಂಜಾರು ಶ್ರೀ ದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮಾಸಾಚರಣೆ - 2021ನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಉದ್ಘಾಟಿಸಿದರು.

ಈ ಸಂದರ್ಭ ಮಾದಕ ದ್ರವ್ಯ ವಿರೋಧಿ ಜಾಗೃತಿ ಪೋಸ್ಟರ್ ನ್ನು ಬಿಡುಗಡೆ ಮಾಡಿದರು.ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಪೋಸ್ಟರ್ ಸ್ಪರ್ಧೆ ಆಯೋಜಿಸಿ,ವಿಜೇತರಿಗೆ ನಗದು ಬಹುಮಾನವನ್ನು ಅವರು ನೀಡಿದರು.

ಈ ಸಂದರ್ಭ ಮನಃಶಾಸ್ತ್ರಜ್ಞೆ ರುಕ್ಸನಾ ಹಸನ್,ಮಂಗಳೂರು ಉತ್ತರ ವಿಭಾಗದ ಎಸಿಪಿ ಎನ್.ಮಹೇಶ್ ಕುಮಾರ್,ಮಂಗಳೂರು ನಗರ ಟ್ರಾಫಿಕ್ ಎಸಿಪಿ ನಟರಾಜ್,ಕಾಲೇಜಿನ ಪ್ರಾಂಶುಪಾಲ ಕೆ.ಎಂ ಪ್ರಕಾಶ್,ಬಜಪೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ,ಮೂಲ್ಕಿ ಇನ್ಸ್ಪೆಕ್ಟರ್ ಕುಸುಮಾಧರ್,ಸುರತ್ಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ,ಕಾವೂರು ಇನ್ಸ್ಪೆಕ್ಟರ್ ರಾಘವ ಪಡೀಲ್,ತುಳು ಹಾಸ್ಯನಟ ಉಮೇಶ್ ಮಿಜಾರ್,ಡಾ.ದೀಪಾ ಕೊಟ್ಟಾರಿ,ಡಾ.ಜಯಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ರಾಜೇಶ್ ಪೌರ್ಣಮಿ ಕಾರ್ಯಕ್ರಮ ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

04/12/2021 09:52 am

Cinque Terre

3.43 K

Cinque Terre

0

ಸಂಬಂಧಿತ ಸುದ್ದಿ