ಉಡುಪಿ: ಉಡುಪಿ ನಗರಕ್ಕೆ ತಾಗಿಕೊಂಡಿರುವ ಕರಾವಳಿ ಬೈಪಾಸ್ ನ ಅವ್ಯವಸ್ಥೆ ಕುರಿತು ಪಬ್ಲಿಕ್ ನೆಕ್ಸ್ಟ್ ನಿನ್ನೆ "ಉಡುಪಿ ಮಲ್ಪೆ ಜನರಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಕರಾವಳಿ ಬೈಪಾಸ್ " ಎಂಬ ಹೆಡ್ಡಿಂಗ್ ನೊಂದಿಗೆ ಸವಿಸ್ತಾರ ವರದಿಯನ್ನು ಪ್ರಕಟಿಸಿತ್ತು. ವರದಿಯಲ್ಲಿ, ಕರಾವಳಿ ಬೈಪಾಸ್ ನ ಅವೈಜ್ಞಾನಿಕ ಅಂಡರ್ ಪಾಸ್ ಕಾಮಗಾರಿ ಮತ್ತು ಹೊಂಡಗಳಿಂದ ಕೂಡಿದ ರಸ್ತೆಯಿಂದಾಗಿ ಪ್ರವಾಸಿಗರು ಮತ್ತು ಉಡುಪಿ ನಗರದ ಜನರು ಅನುಭವಿಸುತ್ತಿರುವ ಪಡಿಪಾಡಲಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವರದಿ ಬಂದ 24 ತಾಸಿನೊಳಗೇ ಸ್ಥಳೀಯ ಆಡಳಿತವು ಕರಾವಳಿ ಬೈಪಾಸ್ ನ ಅಂಡರ್ ಪಾಸ್ ನಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಿಸಿದೆ.ಇದು ಪಬ್ಲಿಕ್ ನೆಕ್ಸ್ಟ್ ಅಭಿಯಾನಕ್ಕೆ ಸಂದ ಜಯ. ಜೊತೆಗೆ ಸಾಮಾಜಿಕ ಕಾರ್ಯಕರ್ತರು ಕೂಡ ನಮ್ಮ ಮಾಧ್ಯಮದ ಜೊತೆ ಕೈಜೋಡಿಸಿ ಸಮಸ್ಯೆಯನ್ನು ಬೆಳಕಿಗೆ ತರುವಲ್ಲಿ ಸಹಕಾರ ನೀಡಿದ್ದರು.ಇದೀಗ ರಸ್ತೆ ಹೊಂಡ ಮುಚ್ಚಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, ಪಬ್ಲಿಕ್ ನೆಕ್ಸ್ಟ್ ಗೆ ಸಾಮಾಜಿಕ ಕಾರ್ಯಕರ್ತರು ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
03/12/2021 04:05 pm