ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಎಸ್. ಕೋಡಿ: ರಸ್ತೆಬದಿಯ ಗಿಡಗಂಟಿ ತೆರವು ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಕಿನ್ನಿಗೋಳಿ ಮಂಗಳೂರು ಹೆದ್ದಾರಿಯ ಎಸ್ ಕೋಡಿ ಜಂಕ್ಷನ್ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ, ಹೆದ್ದಾರಿಗೆ ತಾಗಿಕೊಂಡೆ ಗಿಡಗಂಟಿ ಕಾಡು ಬೆಳೆದಿದ್ದು ಶಾಲಾ ಮಕ್ಕಳಿಗೆ ನಡೆದಾಡಲು ಅನಾನುಕೂಲವಾಗಿದೆ.

ಈ ಪರಿಸರದಲ್ಲಿ ಶಾಲೆ ಹಾಗೂ ತಾಂತ್ರಿಕ ವಿದ್ಯಾಲಯಗಳು ಇದ್ದು ಕೂಡಲೇ ಗಿಡಗಂಟಿಗಳನ್ನು ತೆರವುಗೊಳಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಸಂಬಂಧಪಟ್ಟ ಇಲಾಖೆ ಗಿಡಗಂಟೆಗಳನ್ನು ತೆರವುಗೊಳಿಸಿದೆ.

ಕಿನ್ನಿಗೋಳಿ ಮಂಗಳೂರು ಕಟೀಲು ಮೂಲ್ಕಿ ಕಡೆಗೆ ಸಾವಿರಾರು ವಾಹನಗಳು ಸಂಚರಿಸುತ್ತಿರುವ,ಸದಾ ಬ್ಯುಸಿ ವಾತಾವರಣವಿರುವ ಈ ರಸ್ತೆಯ ಶಾಲಾ ಪರಿಸರದಲ್ಲಿ ಅಪಾಯ ಸಂಭವಿಸುವ ಮೊದಲೇ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಹೆದ್ದಾರಿ ಬದಿಯಲ್ಲಿ ಫುಟ್ಬಾತ್ ನಿರ್ಮಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/12/2021 04:38 pm

Cinque Terre

7.28 K

Cinque Terre

0

ಸಂಬಂಧಿತ ಸುದ್ದಿ