ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಕ್ಕಿಕಟ್ಟೆ: ಸ್ಥಳೀಯರ ಅಡೆತಡೆಗಳ ನಡುವೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭ

ಮುಲ್ಕಿ: ಕಳೆದ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಬಹುನಿರೀಕ್ಷೆಯ ಬಳ್ಕುಂಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಕ್ಕಿಕಟ್ಟೆ ಜಂಕ್ಷನ್ ಬಳಿಯಿಂದ ಮುಲ್ಕಿ ಸಮೀಪದ ಕೆಂಪುಗುಡ್ಡೆ ಕಿಲ್ಪಾಡಿ ವರೆಗಿನ ಸುಮಾರು 3.50ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಆಯ್ದ ಸ್ಥಳಗಳಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರದಿಂದ ಆರಂಭವಾಗಿದ್ದು ಕುಕ್ಕಿಕಟ್ಟೆಯಿಂದ ಕೊಲ್ಲೂರು ಪದವು ವರೆಗಿನ ರಸ್ತೆ ಬಂದ್ ಮಾಡಲಾಗಿದೆ.

ಆದರೆ ಏಕಾಏಕಿ ರಸ್ತೆ ಬಂದ್ ಮಾಡಿದ್ದರಿಂದ ಸ್ಥಳೀಯ ನಾಗರಿಕರು ತೀವ್ರ ತೊಂದರೆಗೆ ಒಳಗಾಗಿದ್ದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಸ್ತೆ ಬಂದ್ ಮಾಡಿದ್ದರಿಂದ ಕೊಲ್ಲೂರು ಪದವು ಬಳಿಯ ನಾಗರಿಕರು, ಶಾಲಾ ಮಕ್ಕಳು, ಸಂಚರಿಸಲು ತೀವ್ರ ತೊಂದರೆ ಉಂಟಾಗಿದ್ದು ಏಕಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಆಗ್ರಹಿಸಿದರು.

ಬಳಿಕ ಗುತ್ತಿಗೆದಾರರು ನಾಗರಿಕರನ್ನು ಸಮಾಧಾನಪಡಿಸಿ ಏಕಮುಖ ಸಂಚಾರ ಕೆಲಸವು ಮಾಡಿಕೊಟ್ಟಿದ್ದಾರೆ.

ಕಾಮಗಾರಿ ಭರದಿಂದ ಸಾಗುತ್ತಿದ್ದು ಕುಕ್ಕಿ ಕಟ್ಟೆ ಜಂಕ್ಷನ್ ಬಳಿ ಯಿಂದ ಕೊಲ್ಲೂರು ಪದವು ವರೆಗೆ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ನಡೆಯಲಿದೆ.

ಈ ರಸ್ತೆಯಲ್ಲಿ ಹಲವು ಅಪಾಯಕಾರಿ ತಿರುವು ಗಳಿದ್ದು ಸರಕಾರಿ ಜಾಗವನ್ನು ಗುರುತಿಸಿ ನೇರ ರಸ್ತೆ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ.

Edited By : Shivu K
Kshetra Samachara

Kshetra Samachara

30/11/2021 09:02 pm

Cinque Terre

16.5 K

Cinque Terre

0

ಸಂಬಂಧಿತ ಸುದ್ದಿ