ಮುಲ್ಕಿ: ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಎಸ್ ಕೋಡಿ ಜಂಕ್ಷನ್ ಅಪಾಯಕಾರಿಯಾಗಿದ್ದು ಸಂಚಾರ ದುಸ್ತರವಾಗಿದೆ.
ಎಸ್ ಕೋಡಿ ಜಂಕ್ಷನ್ ಬಳಿಯಿಂದ ಮಂಗಳೂರು ಕಡೆಗೆ ತೆರಳುವ ಹೆದ್ದಾರಿ ಇಕ್ಕೆಲಗಳಲ್ಲಿ ಹುಲ್ಲಿನ ಪೊದೆ ಬೆಳೆದಿದ್ದು ಶಾಲಾ ಮಕ್ಕಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ.
ಈ ಪರಿಸರದಲ್ಲಿ ಐಟಿಐ ಸಹಿತ ಆಂಗ್ಲ ಮಾಧ್ಯಮ ಶಾಲೆ ಕಾರ್ಯಾಚರಿಸುತ್ತಿದ್ದು ಬಸ್ಸಿನಿಂದ ಇಳಿದು ಮಕ್ಕಳು ಜೀವಪಣಕ್ಕಿಟ್ಟು ರಸ್ತೆಯಲ್ಲಿ ನಡೆಯುವ ಪರಿಸ್ಥಿತಿ ಎದುರಾಗಿದೆ
ಮಂಗಳೂರು ಎಸ್. ಕೋಡಿ ಕಿನ್ನಿಗೋಳಿ ರಸ್ತೆ ಸದಾ ವಾಹನ ಸಂಚಾರದ ತಾಣವಾಗಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ತೋರಿದ್ದು ನಾಗರಿಕರು ಬವಣೆ ಪಡುವಂತಾಗಿದೆ.
ಕೂಡಲೇ ಹೆದ್ದಾರಿ ಇಲಾಖೆ ಎಸ್ ಕೋಡಿ ಜಂಕ್ಷನ್ ಬಳಿಯ ಹೊಂಡಗಳನ್ನು ಮುಚ್ಚುವುದರ ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
27/11/2021 01:12 pm