ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಸ್ಸುನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ.
ಮಂಗಳೂರಿನಿಂದ ಹಳೆಯಂಗಡಿ ಕಿನ್ನಿಗೋಳಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯ ಬಸ್ಸು ನಿಲ್ದಾಣದ ಎದುರು ಅದಾನಿ ಗ್ಯಾಸ್ಪೈಪ್ಲೈನ್ ಕಾಮಗಾರಿಯ ಪೈಪುಗಳು ಕಳೆದ ಕೆಲ ತಿಂಗಳಿನಿಂದ ಬಿದ್ದುಕೊಂಡಿದ್ದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.
ಬಸ್ಸು ನಿಲ್ದಾಣ ಕೇವಲ ನಾಮಕೆವಾಸ್ತೆ ಇದ್ದು ನಿಲ್ದಾಣದ ಹಿಂಬದಿಯಲ್ಲಿ ಭಾರಿಗಾತ್ರದ ಹುಲ್ಲುಗಳು ಬೆಳೆದು ನಿಲ್ದಾಣದಲ್ಲಿ ಗಲೀಜು ಮಯ ವಾತಾವರಣ ಸೃಷ್ಟಿಯಾಗಿದೆ.
ನಿಲ್ದಾಣದ ಬದಿಯಲ್ಲಿ ಕಸ ತ್ಯಾಜ್ಯ ಬಿದ್ದುಕೊಂಡಿದ್ದು ವಿಲೇವಾರಿಯಾಗದೇ ದುರ್ವಾಸನೆ ಬೀರುತ್ತಿದ್ದು ಸುಸಜ್ಜಿತ ಬಸ್ಸು ತಂಗುದಾಣ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಹಳೆಯಂಗಡಿಯಲ್ಲಿ ಅರ್ಧಮರ್ಧ ಕಾಮಗಾರಿ ನಡೆದಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ನೀರು ನಿಂತು ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ.
ಕೂಡಲೇ ಸಂಸದರು ಎಚ್ಚೆತ್ತು ಹೆದ್ದಾರಿ ಇಲಾಖೆಗೆ ಸೂಚನೆ ನೀಡಿ ಸರ್ವಿಸ್ ನಿರ್ಮಾಣದ ಜೊತೆಗೆ ಅದಾನಿ ಗ್ಯಾಸ್ಪೈಪ್ಲೈನ್ ಕಾಮಗಾರಿಯನ್ನು ಬೇಗನೆ ಪೂರ್ತಿ ಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
18/11/2021 01:40 pm