ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ

ಮಂಗಳೂರು: ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರದ್ದಾಗಿದೆ. ಅದರಲ್ಲೂ ಯುವ ಸಮಾಜ ಸ್ಪಂದಿಸಿದ್ದಲ್ಲಿ ಹಾಗೂ ಎಚ್ಚೆತ್ತ ನಾಗರಿಕರಿಂದ ಇದು ಸುಲಭ ಸಾಧ್ಯ ಎಂದು ಲೋಕಾಯುಕ್ತ ಮಂಗಳೂರು ನಿರೀಕ್ಷಕ ಅಮಾನುಲ್ಲಾ ಅಭಿಪ್ರಾಯಪಟ್ಟರು.

ಕರ್ನಾಟಕ ಲೋಕಾಯುಕ್ತ, ನಗರದ ರಥಬೀದಿಯ ಡಾ. ದಯಾನಂದ ಪೈ - ಪಿ. ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಸಹಯೋಗದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ -2021ರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಮಾತನಾಡಿ, ಶ್ರೀಮಂತ ಯುವ ರಾಷ್ಟ್ರವಾದ ಭಾರತದಲ್ಲಿ ಯುವಕರು ಸಂಘಟಿತರಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಿ ದೇಶದ ಘನತೆಯನ್ನು ಎತ್ತಿ ಹಿಡಿಯುವಂತೆ ಕೋರಿದರು.

Edited By : Nirmala Aralikatti
Kshetra Samachara

Kshetra Samachara

17/11/2021 10:49 pm

Cinque Terre

14.12 K

Cinque Terre

2

ಸಂಬಂಧಿತ ಸುದ್ದಿ