ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಸದಾ ಜನ ನಿಬಿಡ ಪ್ರದೇಶ ಕಾರ್ನಾಡ್ ಮೀನು ಮಾರುಕಟ್ಟೆ ತೀರಾ ಅಪಾಯದ ಸ್ಥಿತಿಯಲ್ಲಿದ್ದು, ಕುಸಿತ ಭೀತಿ ಎದುರಿಸುತ್ತಿದೆ.
ಮೀನು ಮಾರುಕಟ್ಟೆಯ ಒಳಗಿನ ಕೋಣೆಯ ಹೆಂಚು, ಪಕ್ಕಾಸು ಈಗಾಗಲೇ ಬಿದ್ದಿದ್ದು, ಕೋಣೆಯೂ ಕುಸಿಯುವ ಹಂತದಲ್ಲಿದೆ.
ಈ ಹಳೆಯ ಮೀನು ಮಾರುಕಟ್ಟೆ ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಕಾರ್ನಾಡು ಪೇಟೆ ಬದಿ ಕಾರ್ಯಾಚರಿಸುತ್ತಿರುವುದರಿಂದ ಮುಂದೆ ರಾಜ್ಯ ಹೆದ್ದಾರಿ ಅಗಲೀಕರಣದ ವೇಳೆ ಮೀನು ಮಾರುಕಟ್ಟೆ ಸ್ಥಳಾಂತರಿಸಿ ಸೂಕ್ತ ಜಾಗ ಗುರುತಿಸಿ, ಹೊಸ ಕಟ್ಟಡಕ್ಕೆ ಮುಲ್ಕಿ ನಪಂ ಆಡಳಿತ ಮೀನಮೇಷ ಎಣಿಸುತ್ತಿದ್ದರೆ ಹಳೆ ಕಟ್ಟಡ ಈಗಲೋ, ಆಗಲೋ ಎನ್ನುತ್ತಿದೆ.
ಜೋರು ಮಳೆ ಬಂದರೆ ಕೋಣೆಯೊಳಗೇ ನೀರು ನುಗ್ಗುತ್ತಿದೆ.
ಈ ಬಗ್ಗೆ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ಮೀನು ಮಾರುಕಟ್ಟೆ ಕೋಣೆಯ ದುಸ್ಥಿತಿ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ದುರಸ್ತಿ ಪಡಿಸಲಾಗುವುದು ಎಂದಿದ್ದಾರೆ.
Kshetra Samachara
14/11/2021 10:01 pm