ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸರಕಾರದಿಂದ ಉದ್ಯೋಗ ಸೃಷ್ಟಿಗೆ ಪೆಟ್ಟು; ಬರೀ ಕೈಗಾರಿಕೆಗಳ ಮೇಲೆ ದೃಷ್ಟಿ"

ಮಂಗಳೂರು: ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದು, ಉದ್ಯೋಗ ಇರುವವರಿಗೂ ಗುಣಮಟ್ಟದ ಉದ್ಯೋಗ ದೊರಕುತ್ತಿಲ್ಲ. ಸರಕಾರ ಉದ್ಯೋಗ ಸೃಷ್ಟಿ ಬಗ್ಗೆ ಗಮನ ಹರಿಸದೆ ಬರೀ ಕೈಗಾರಿಕೆಗಳ ಮೇಲೆ ದೃಷ್ಟಿ ನೆಟ್ಟಿದೆ ಎಂದು ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ ಟೀಕಿಸಿದರು.

ಸಿಪಿಐಎಂ 23ನೇ ದ.ಕ. ಜಿಲ್ಲಾ ಸಮ್ಮೇಳನದಂಗವಾಗಿ ಸಿಪಿಐಎಂ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸಮಿತಿಗಳ ಆಯೋಜನೆಯಲ್ಲಿ "ಉದ್ಯೋಗದ ಹಕ್ಕು, ಸರಕಾರದ ನೀತಿಗಳು" ವಿಷಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ.ಚಂದ್ರ ಪೂಜಾರಿ, ಉದ್ಯೋಗ ಸೃಷ್ಟಿ ಮಾಡಬೇಕಾದ ಸರ್ಕಾರವೇ ಮೌನ ವಹಿಸಿದೆ. 2016 ರಲ್ಲಿ ನಡೆದ ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕತೆ ಹಠಾತ್ ಕುಸಿತವಾಗಿದೆ. ಬಳಿಕ ಜಿಎಸ್ಟಿಯಿಂದಾಗಿ ಆರ್ಥಿಕತೆ ಮತ್ತಷ್ಟು ಕುಸಿದಿದೆ ಎಂದರು.

ಕೊರೊನಾ ಲಾಕ್ ಡೌನ್ ಬಳಿಕ‌ ಜನರ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೂ ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಕ್ರಮ ಕೈಗೊಂಡಿಲ್ಲ. ಉದ್ಯೋಗ ಇರುವವರಿಗೂ ಭದ್ರತೆ ಇಲ್ಲ. ಅಸಂಘಟಿತ ವಲಯ ಅಧಿಕವಾಗಿದೆ. ಕೆಲವರಿಗೆ ಕನಿಷ್ಠ ಸಂಬಳವೂ ಸಿಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಜನರಿಗೆ ಪರಿಸ್ಥಿತಿ ಬಗ್ಗೆ ತಿಳಿಯುವುದಿಲ್ಲ. ಮೇಲ್ನೋಟಕ್ಕೆ ಜನರು ತೊಂದರೆಯಲ್ಲಿ ಇಲ್ಲದಂತೆ ಕಾಣುತ್ತದೆ. ನಿರುದ್ಯೋಗ ಯಾಕೆ ಇದೆ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಾದ ತುರ್ತು ಅವಶ್ಯಕತೆಯಲ್ಲಿ ನಾವಿದ್ದೇವೆ ಎಂದು ಪ್ರೊ.ಚಂದ್ರ ಪೂಜಾರಿ ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

13/11/2021 12:48 pm

Cinque Terre

2.65 K

Cinque Terre

0

ಸಂಬಂಧಿತ ಸುದ್ದಿ