ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅತಿಕಾರಿಬೆಟ್ಟು ಮಟ್ಟು ರಸ್ತೆ ಅವ್ಯವಸ್ಥೆ ಮುಗಿಯದ ಗೋಳು

ಮುಲ್ಕಿ: ಕಳೆದ ಒಂದು ವರ್ಷದಿಂದ ತೀವ್ರ ಹದಗೆಟ್ಟಿರುವ ಮುಲ್ಕಿ ನಗರ ಪಂಚಾಯತ್ ಹಾಗೂ ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮುಲ್ಕಿ- ಮಟ್ಟು ಸಂಪರ್ಕ ಮೀನುಗಾರಿಕಾ ರಸ್ತೆ ತೀವ್ರ ಹದಗೆಟ್ಟಿದ್ದು ಮುಗಿಯದ ಗೋಳಾಗಿ ಪರಿಣಮಿಸಿದೆ.

ಮೂಲ್ಕಿ ನಪಂ ವ್ಯಾಪ್ತಿಯ ವಿಜಯ ಕಾಲೇಜು ಬಳಿಯಿಂದ ಮಟ್ಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮರಳು ಸಾಗಾಟ ವಾಹನಗಳಿಂದ ತೀವ್ರ ಹದಗೆಟ್ಟು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಗಳು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

ಮಟ್ಟು ಶಾಂಭವಿ ನದಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳುಗಾರಿಕೆಯಿಂದ ರಸ್ತೆ ತೀವ್ರ ಹದಗೆಟ್ಟಿದ್ದು ತಾತ್ಕಾಲಿಕ ನೆಲೆಯಲ್ಲಿ ಹಾಕಿರುವ ಜಲ್ಲಿ ಕಲ್ಲು, ಹುಡಿಯಿಂದ ಮಳೆಗೆ ಕೆಸರು ಬಿಸಿಲಿಗೆ ದೂಳುಮಯವಾಗಿದೆ.

ಆದರೆ ಮಟ್ಟು ಗ್ರಾಮದಲ್ಲಿ ಕೆಟ್ಟು ಹೋಗಿರುವ ರಸ್ತೆ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸ್ಥಳೀಯರಿಗೆ ಮತ್ತಷ್ಟು ಗೊಂದಲಮಯವಾಗಿದ್ದು ರಸ್ತೆ ಯಾರು ದುರಸ್ತಿ ಪಡಿಸುವುದು ಎಂಬ ಜಿಜ್ಞಾಸೆ ಉಂಟಾಗಿದೆ.

ಕಳೆದ ಒಂದು ವರ್ಷದಿಂದ ರಸ್ತೆ ಅವ್ಯವಸ್ಥೆ ಯಿಂದ ಸಂಚಾರ ದುಸ್ತರವಾಗಿದ್ದು ಸ್ಥಳೀಯರು ರಸ್ತೆ ನಾಶಪಡಿಸಿದ ಮರಳು ಮಾಫಿಯಾ ದೊರೆಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/11/2021 03:29 pm

Cinque Terre

6.94 K

Cinque Terre

0