ಮುಲ್ಕಿ: ಸದಾ ಬ್ಯೂಸಿಯಾಗಿರುವ ಮಂಗಳೂರಿನಿಂದ ಕಿನ್ನಿಗೋಳಿಗೆ ಸಂಪರ್ಕ ಕಲ್ಪಿಸುವ ಹಳೆಯಂಗಡಿ ಇಂದಿರಾನಗರ ರೈಲ್ವೆ ಗೇಟ್ ರಸ್ತೆ ಭಾರಿ ಮಳೆಗೆ ಕೆಸರುಮಯವಾಗಿದ್ದು ಸಂಚರಿಸಲು ತ್ರಾಸದಾಯಕ ವಾಗಿ ಪರಿಣಮಿಸಿದೆ
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರ ಬೇಡಿಕೆಯಾದ ರಸ್ತೆ ಅಗಲೀಕರಣ ಕಾಮಗಾರಿ ನಡೆಯದೆ ಈ ಭಾಗದ ಜನರಿಗೆ ಸಂಚಾರ ದುಸ್ತರವಾಗಿದೆ.
ಹಳೆಯಂಗಡಿ ಕಿನ್ನಿಗೋಳಿ-ಕಟೀಲು ಸಂಪರ್ಕ ರಸ್ತೆ ನಿಮಿಷಕ್ಕೊಂದರಂತೆ ವಾಹನ ಓಡಾಡುತ್ತಿದ್ದು ಹಳೆಯಂಗಡಿ ಜಂಕ್ಷನ್ ಬಳಿಯಿಂದ ರೈಲ್ವೆ ಗೇಟ್ ನವರೆಗೆ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಲಕಡೆ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿದ್ದು ಸ್ಥಳೀಯ ಮನೆಗಳಿಗೆ ಕೃತಕ ನೆರೆ ಭೀತಿ ಎದುರಾಗಿದೆ.
ಇದೇ ರೀತಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಲ್ಲುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.ಕೂಡಲೇ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಒತ್ತಾಯಿಸಿದ್ದಾರೆ.
Kshetra Samachara
06/11/2021 12:22 pm