ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹಾಯ ಧನದಲ್ಲಿ ಪೆಟ್ರೋಲ್, ಗ್ಯಾಸ್ ನೀಡುವಂತೆ ಬಿಎಮ್‌ಎಸ್‌ನಿಂದ ಪ್ರಧಾನಮಂತ್ರಿಗಳಿಗೆ ಮನವಿ.

ಪುತ್ತೂರು: ದಿನೇ ದಿನೇ ಪೆಟ್ರೋಲ್ ಹಾಗು ಗ್ಯಾಸ್ ದರ ಏರಿಕೆಯಾಗುತ್ತಿರುವುದರಿಂದ ರಿಕ್ಷಾ ಚಾಲಕರು ಮತ್ತು ಮಾಲಕರು ಬಹಳ ಕಷ್ಟದಲ್ಲಿದ್ದಾರೆ. ಹಾಗಾಗಿ ಪೆಟ್ರೋಲ್ ಮತ್ತು ಗ್ಯಾಸ್‌ನ್ನು ಸಹಾಯಧನದಲ್ಲಿ ನೀಡುವಂತೆ ಪುತ್ತೂರು ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕರು ಪುತ್ತೂರು ಸಹಾಯಕ ಕಮೀಷನರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದರು.

ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ಕೃಷಿಕರಿಗೆ ಪಂಪ್‌ಸೆಟ್ ಉಚಿತವಾಗಿ ವಿದ್ಯುತ್ ವಿತರಿಸಲಾಗುತ್ತಿದೆ. ಆದರೆ ಬಡ ಆಟೋ ರಿಕ್ಷಾ ಚಾಲಕರಿಗೆ ಯಾವುದೇ ರೀತಿಯ ಸಹಾಯವೂ ಇಲ್ಲದಾಗಿದೆ. ಆದ್ದರಿಂದ ರಿಕ್ಷಾಗಳಿಗೆ ಕೂಡಾ ಪೆಟ್ರೋಲ್ ಹಾಗೂ ಗ್ಯಾಸ್ ಅನ್ನು ಸಹಾಯ ಧನದಲ್ಲಿ ಒದಗಿಸುವಂತೆ ಅವರು ಮನವಿಯಲ್ಲಿ ವಿನಂತಿಸಿದ್ದಾರಲ್ಲದೆ, ಇಲ್ಲವಾದರೆ ಮುಂದಿನ ದಿನ ರಿಕ್ಷಾ ಚಾಲಕರು ಮತ್ತು ಮಾಲಕರು ಜೀವನ ನಡೆಸಲು ಅಸಾಧ್ಯವಾಗಿ ಆತ್ಮಹತ್ಯೆಯನ್ನೇ ಮಾಡಬೇಕಾಗು ಪ್ರಮೇಯ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/11/2021 10:13 pm

Cinque Terre

5.07 K

Cinque Terre

1

ಸಂಬಂಧಿತ ಸುದ್ದಿ