ಬಜಪೆ: ಬಜಪೆಯ ಹಳೆ ಏರ್ ಪೋರ್ಟ್ ರಸ್ತೆಯ ಎರಡೂ ಅಂಚುಗಳಲ್ಲಿ ಬೃಹತ್ ಗಾತ್ರದ ಹುಲ್ಲುಗಳು ಬೆಳೆದು ನಿಂತಿದ್ದು,ವಾಹನ ಸವಾರರು ಹಾಗೂ ಪಾದಚಾರಿಗಳಿಗಳಿಗೆ ಕಂಟಕವಾಗಿ ಪರಿಣಮಿಸಿದೆ.ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಘನ ಹಾಗೂ ಲಘು ವಾಹನಗಳು ಸಂಚರಿಸುತ್ತಿದ್ದು,ರಸ್ತೆ ಕೂಡಾ ಕಿರಿದಾಗಿದೆ.ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಸಂದರ್ಭದಲ್ಲಿ ಪಾದಚಾರಿಗಳು ರಸ್ತೆಯ ಅಂಚುಗಳಲ್ಲಿ ಸರಾಗವಾಗಿ ನಡೆದು ಕೊಂಡು ಹೋಗುವಂತಿಲ್ಲ .ರಸ್ತೆಯ ಎರಡೂ ಅಂಚುಗಳ ಲ್ಲಿ ಬೃಹತ್ ಗಾತ್ರದಲ್ಲಿ ಹುಲ್ಲುಗಳು ಬೆಳೆದು ನಿಂತ ಪರಿಣಾಮವಾಗಿ ಪಾದಚಾರಿಗಳು ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಸಂಬಂದ ಪಟ್ಟ ಪಂಚಾಯತ್ ರಸ್ತೆಯ ಎರಡೂ ಅಂಚುಗಳಲ್ಲಿ ಬೆಳೆದು ನಿಂತ ಬೃಹತ್ ಗಾತ್ರದ ಹುಲ್ಲುಗಳನ್ನು ತೆರವು ಗೊಳಿಸಿ ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
Kshetra Samachara
30/10/2021 12:04 pm