ಬಜಪೆ:ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಯ ವಿಮಾನ ನಿಲ್ದಾಣಕ್ಕೆ ಸಾಗುವಂತಹ ರಸ್ತೆಯ ಅಂಚಿನಲ್ಲಿ ಕಸದ ರಾಶಿ ಬಿದ್ದು ಕೊಳೆತು ದುರ್ನಾತ ಬೀರುತ್ತಿದೆ.ಸ್ಥಳೀಯ ಫ್ಲ್ಯಾಟ್ ನಿವಾಸಿಗಳು ಹಾಗೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳ ಸಹಿತ ಹಾಗೂ ದಾರಿಯಲ್ಲಿ ಹೋಗುವ ಜನರು ಇಲ್ಲಿಯೇ ಕಸ ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಂದಾವರ ಗ್ರಾಮಪಂಚಾಯತ್ ನ ಸುತ್ತಮುತ್ತಲಿನ ವ್ಯಾಪ್ತಿಯ ಕೈಕಂಬ ಪೇಟೆ ಸಹಿತ ಎಲ್ಲೆಡೆ ತ್ರಾಜ್ಯದ್ದೆ ಸಮಸ್ಯೆ ಜನತೆಯನ್ನು ಕಾಡುತ್ತಿದೆ.ಕೊಳೆತು ದುರ್ನಾತ ಬೀರುತ್ತಿರುವ ಕಸದ ತ್ಯಾಜ್ಯವು ಪಂಚಾಯತ್ ವ್ಯಾಪ್ತಿಯ ಅಲ್ಲಲ್ಲಿ ಕಂಡುಬರುತ್ತಿದ್ದು,ಇದರಲ್ಲಿ ಹಸಿ ತ್ಯಾಜ್ಯ ಸಹಿತ ಎಲ್ಲವನ್ನೂ ರಸ್ತೆ ಬದಿಯಲ್ಲಿಯೇ ಎಸೆದು ಹೋಗುತ್ತಿದ್ದಾರೆ .ಇದಕ್ಕೆ ಪಂಚಾಯತ್ ನ ನಿರ್ಲಕ್ಷ್ಯವೇ ಮುಖ್ಯ ಕಾರಣ ವೆಂದು ಸ್ಥಳೀಯರು ದೂರಿದ್ದಾರೆ.
Kshetra Samachara
18/10/2021 08:20 pm