ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಪಾಯದ ಸ್ಥಿತಿಯಲ್ಲಿ ಕರ್ನಿರೆ ಕೊಪ್ಪಲ ಪಚ್ಚೆಂಗೆರಿ ಕಿರು ಸೇತುವೆ ಸಂಚಾರ ದುಸ್ತರ

ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಹಾಗೂ ಬಳ್ಕುಂಜೆ ಗ್ರಾಮಗಳನ್ನು ಸಂಪರ್ಕಿಸುವ ಕರ್ನಿರೆ ಕೊಪ್ಪಲ ಪಚ್ಚೆಂಗೆರಿ(ಮಾದಿಗುರಿ) ಕಿರು ಸೇತುವೆ ಅಪಾಯದ ಸ್ಥಿತಿಯಲ್ಲಿದ್ದು ಕುಸಿತಕ್ಕೆ ಕ್ಷಣಗಣನೆ ಎದುರಿಸುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ ಕೆಲ ವರ್ಷಗಳ ಹಿಂದೆ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಮೈಲೊಟ್ಟು ಜಂಕ್ಷನ್ ಬಳಿ ಯಿಂದ ಉಡುಪಿ ಜಿಲ್ಲೆಯ ಪಲಿಮಾರು ಗಡಿಭಾಗದ ಸೇತುವೆ ವರೆಗೆ ಸುಮಾರು ಕೋಟಿ ವೆಚ್ಚದಲ್ಲಿ ಅಂದಿನ ಸಚಿವರಾಗಿದ್ದ ಅಭಯಚಂದ್ರ ನೇತೃತ್ವದಲ್ಲಿ ಡಾಮರೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿ ನಡೆದಿತ್ತು.

ಆದರೆ ಅತಿಕಾರಿಬೆಟ್ಟು ಗ್ರಾಮದ ಶಾಂಭವಿ ನದಿಯಲ್ಲಿ ಎಗ್ಗಿಲ್ಲದೆ ಮರಳುಗಾರಿಕೆಯಿಂದ ಭಾರವಾದ ಮರಳು ಸಾಗಾಣಿಕೆ ಟಿಪ್ಪರ್ ಗಳು ಚಲಿಸಿ ರಸ್ತೆ ನಾಶವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅದರಲ್ಲೂ ಕರ್ನಿರೆ ಕೊಪ್ಪಲ ಪಚ್ಚೆಂಗೆರಿ(ಮಾದಿಗುರಿ) ಸೇತುವೆ ತೀರಾ ಅಪಾಯದ ಸ್ಥಿತಿಯಲ್ಲಿದ್ದು ಭಾರಿ ಗಾತ್ರದ ಹೊಂಡಗಳಿಂದ ಸೇತುವೆ ಕುಸಿತದ ಭೀತಿ ಉಂಟಾಗಿದೆ

ಇನ್ನೊಂದೆಡೆ ಅತಿಕಾರಿಬೆಟ್ಟು ಹಾಗೂ ಬಳ್ಕುಂಜೆ ಗಡಿಭಾಗದ ಸೇತುವೆ ಬಳಿ ಘನವಾಹನಗಳ ನಿಷೇಧ ನಾಮಫಲಕ ಅಳವಡಿಸಿದ್ದರೂ ಮರಳು ಮಾಫಿಯಾದ ಟಿಪ್ಪರ್ ಗಳು ಎಗ್ಗಿಲ್ಲದೆ ಸಂಚರಿಸಿ ರಸ್ತೆಗೆ ಹಾನಿಯಾಗಿದೆ.

ಈ ರಸ್ತೆಯ ಆಯ್ದ ಭಾಗದಲ್ಲಿ ಕಾಂಕ್ರೀಟಿಕರಣ ಗೊಂಡಿದ್ದು ಅದಕ್ಕೂ ಹಾನಿ ಸಂಭವಿಸಿ ಸಂಚಾರ ದುಸ್ತರವಾಗಿದೆ.

ಮುಲ್ಕಿ ಭಾಗದ ಅತಿಕಾರಿ ಬೆಟ್ಟು ಗ್ರಾಮೀಣ ಪ್ರದೇಶದಿಂದ ಉಡುಪಿ ಜಿಲ್ಲೆಯ ಕಾರ್ಕಳ ಬೆಳ್ಮಣ್ಣು ಕುದುರೆಮುಖ ಹೆಬ್ರಿ ಮತ್ತಿತರ ಕಡೆಗಳಿಗೆ ಪ್ರಧಾನ ಸಂಪರ್ಕರಸ್ತೆ ಯಾಗಿರುವ ಈ ರಸ್ತೆ ಸಂಪರ್ಕ ಕಡಿದುಕೊಳ್ಳುವ ಮೊದಲೇ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ದುರಸ್ತಿ ಪಡಿಸಬೇಕು. ಹಾಗೂ ಯಾವುದೇ ಕಾರಣಕ್ಕೂ ಮರಳು ಸಾಗಿಸುವ ವಾಹನಗಳಿಗೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Edited By : Shivu K
Kshetra Samachara

Kshetra Samachara

18/10/2021 09:15 am

Cinque Terre

21.79 K

Cinque Terre

0

ಸಂಬಂಧಿತ ಸುದ್ದಿ