ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು: ಗ್ರಾಮ ಸಭೆ ನಿರ್ಣಯಕ್ಕೆ ಬೆಲೆ ಕೊಡದೆ ಅಕ್ರಮವಾಗಿ ಗಣಿಗಾರಿಕೆ ಪುನರಾರಂಭ- ಗ್ರಾಮಸ್ಥರ ಆಕ್ರೋಶ

ಎಕ್ಕಾರು: ಕಟೀಲು ಸಮೀಪದ ಎಕ್ಕಾರು ಪಂಚಾಯತ್ ಗ್ರಾಮ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ತೆರವಿಗೆ ಗ್ರಾಮ ಸಭೆಯಲ್ಲಿ ಕಳೆದ ದಿನದ ಹಿಂದೆ ನಿರ್ಣಯ ಆಗಿದ್ದರೂ ಗುರುವಾರ ಎಗ್ಗಿಲ್ಲದೆ ಮತ್ತೆ ಗಣಿಗಾರಿಕೆ ನಡೆಯುತ್ತಿದ್ದು ಅಧಿಕಾರಿಗಳು ಮೌನ ವಹಿಸಿದ್ದಾರೆ.

ಅಕ್ರಮವಾಗಿ ಗಣಿಗಾರಿಕೆ ತಡೆಗಟ್ಟಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ಗ್ರಾಮ ಸಭೆ ನಿರ್ಣಯಕ್ಕೆ ಬೆಲೆ ಇಲ್ಲವೇ ಗ್ರಾಮ ಸಭೆ ನಿರ್ಣಯವನ್ನೇ ಗಾಳಿಗೆ ತೂರುವ ಇಂತಹ ಭ್ರಷ್ಟ ಅಧಿಕಾರಿಗಳಿಂದ ಏನು ಅಭಿವೃದ್ಧಿ ಸಾಧ್ಯ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಸರಕಾರಿ ವೇತನ ಪಡೆಯುವ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ತಡೆಯಲು ವಿಫಲರಾಗಿದ್ದಾರೆ.

ಸರಕಾರಕ್ಕೆ ಯಾವುದೇ ಶುಲ್ಕ ಕಟ್ಟದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಶಾಶ್ವತವಾಗಿ ಯಾವುದೇ ಕ್ರಮ ಜರಗಿಸಿಲ್ಲ. ನಿಯಮ, ಕಾನೂನು ಜಾರಿ ಮಾಡುವ ಅಧಿಕಾರಿಗಳು ಈ ರೀತಿ ನಡವಳಿಕೆ ತೋರಿದರೆ, ಜನಸಾಮಾನ್ಯರು ಯಾರಲ್ಲಿ ನ್ಯಾಯ ಕೇಳುವುದು? ಎಂದು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ತಡೆಯದಿದ್ದರೆ ಗಣಿ ಇಲಾಖೆ ಕಛೇರಿಗೆ ಹಾಗೂ ಗ್ರಾಮಕರಣಿಕ ಕಛೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

30/09/2021 07:40 pm

Cinque Terre

5.15 K

Cinque Terre

0

ಸಂಬಂಧಿತ ಸುದ್ದಿ