ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತನೇ ತೋಕೂರು ನಿವಾಸಿ ರಾಘವ ಶೆಟ್ಟಿಗಾರ್ ಎಂಬವರ ಮನೆಯ ಪಕ್ಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಲೇಔಟ್ ನಿರ್ಮಿಸಲಾಗಿದ್ದು ಭಾರಿ ಮಳೆಗೆ ಕೃತಕ ನೆರೆ ಉಂಟಾಗಿ ಮನೆಯೊಳಗೆ ನೀರು ಬಂದು ಭಯಭೀತ ವಾತಾವರಣ ಸೃಷ್ಟಿಯಾಗಿದೆ ಎಂದು ರಾಘವ ಶೆಟ್ಟಿಗಾರ್ ದೂರಿದ್ದಾರೆ.
ರಾಘವ ಶೆಟ್ಟಿಗಾರ್ ಮನೆಯ ಪಕ್ಕದ ತೋಡಿನಲ್ಲಿ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಕೆರೆಕಾಡು, ಹೌಸಿಂಗ್ ಕಾಲನಿ, ಪಳ್ಳಿಗುಡ್ಡೆ ಪ್ರದೇಶದ ನೀರು ಹರಿಯುತ್ತಿದ್ದು ಭಾರೀ ಮಳೆ ಬಂದರೆ ಸಾಕು ನೀರು ಸರಿಯಾಗಿ ಹರಿದು ಹೋಗದೆ ಕೃತಕ ನೆರೆ ಭೀತಿ ಎದುರಾಗುತ್ತಿದೆ
ಕಳೆದ ದಿನದ ಹಿಂದೆ ರಾತ್ರೋರಾತ್ರಿ ಸುರಿದ ಮಳೆಗೆ ಮನೆಯೊಳಗೂ ಹಾಗೂ ದನದ ಹಟ್ಟಿಗೆ ನೀರು ಬಂದಿತ್ತು ಎಂದು ನೆನಪಿಸಿಕೊಂಡ ಅವರು ಅವ್ಯವಸ್ಥೆ ಬಗ್ಗೆ ಪಂಚಾಯತಿಗೆ ದೂರು ನೀಡಿದ್ದು ಹಾಗೂ ಗ್ರಾಮ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರೂ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಮನೆಯ ಸಮೀಪದ ಲೇಔಟ್ ಕಾಲೋನಿಯ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ತೀವ್ರ ತೊಂದರೆಯಾಗಿದೆ. ಎಂದು ಹೇಳಿದ ಅವರು ಕೂಡಲೇ ತೋಡಿನ ಹೂಳೆತ್ತುವುದು ಅಥವಾ ತೋಡನ್ನು ಸ್ಥಳಾಂತರ ಮಾಡಿದರೆ ಸೂಕ್ತ ಜಾಗ ನೀಡಲು ಸಿದ್ಧ ಎಂದು ಹೇಳಿದರೂ ಪಂಚಾಯತ್ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
Kshetra Samachara
30/09/2021 10:35 am