ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮಸ್ಥರ ಸಹಕಾರದಿಂದ ಸ್ವಚ್ಚ ಸುಂದರ ಗ್ರಾಮವನ್ನಾಗಿಸಲು ಸಾಧ್ಯ : ಪ್ರಸಾದ್ ಅಂಚನ್

ಬಜಪೆ:ಗ್ರಾಮಸ್ಥರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಸ್ವಚ್ಚ ಸುಂದರ ಗ್ರಾಮ ವನ್ನಾಗಿಸಲು ಸಾಧ್ಯ ಎಂದು ಪೆರ್ಮುದೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರಸಾದ್ ಅಂಚನ್ ಹೇಳಿದರು.ಅವರು ಪೆರ್ಮುದೆ ಗ್ರಾಮ ಪಂಚಾಯತ್ ,ಯುವಕಮಂಡಲ ಪಡುಪದವು, ವನಿತಾ ಸೇವಾ ಸಮಾಜ ಪಡುಪದವು 9ನೇ ವಿಭಾಗ ಕಾಟಿಪಳ್ಳ(ಕುತ್ತೆತ್ತೂರು)ಇದರ ಸಹಯೋಗದೊಂದಿಗೆ ಪಡುಪದವು ಪರಿಸರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಸಂದರ್ಭದಲ್ಲಿ ಪೆರ್ಮುದೆ ಗ್ರಾ.ಪಂ ಪಿಡಿಓ ಶ್ರೀಮತಿ ಶೈಲಜಾ,ಯುವಕ ಮಂಡಲದ ಅಧ್ಯಕ್ಷ ಸತೀಶ್ ಶೆಟ್ಟಿ,ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ,ವನಿತಾ ಸೇವಾ ಸಮಾಜದ ಅಧ್ಯಕ್ಷೆ ವಸಂತಿ ಕರುಣಾಕರ ,ಗ್ರಾ.ಪಂ ಸದಸ್ಯರುಗಳು,ಊರಿನ ಗಣ್ಯರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

28/09/2021 03:38 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ