ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕರಾವಳಿ ಬೈಪಾಸ್; ತ್ಯಾಜ್ಯದ ರಾಶಿ..! ಸೂಕ್ತ ಕ್ರಮಕ್ಕೆ ಆಗ್ರಹ.

ಉಡುಪಿ : ರಾಷ್ಟ್ರೀಯ ಹೆದ್ದಾರಿ 66, ಕರಾವಳಿ ಬೈಪಾಸ್ ಬಳಿ, ಕೋಳಿ ತ್ಯಾಜ್ಯ, ತೆಂಗಿನ ಕಾಯಿ ಚಿಪ್ಪುಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯಲಾಗಿದ್ದು, ಪರಿಸರದಲ್ಲಿ ಗಬ್ಬು ವಾಸನೆ ಹರಡಿದೆ.

ಪರಿಸರದ ಸೌಂದರ್ಯವು ಹಾಳಾಗಿದೆ. ಎಳೆನೀರಿನ ಚಿಪ್ಪುಗಳಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳು ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ.

ಮಲೇರಿಯಾ, ಡೆಂಗ್ಯೂ ಕಾಯಿಲೆ ಹರಡುವ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಇಲ್ಲಿಯ ಸ್ಥಳ ಮಾರ್ಪಟ್ಟಿದೆ.

ಸಾಮಾಜಿಕಪ್ರಜ್ಞೆ ಇಲ್ಲದ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

28/09/2021 02:05 pm

Cinque Terre

15.04 K

Cinque Terre

0