ಮುಲ್ಕಿ: ಮುಲ್ಕಿ ನಗರ ಪಂಚಾ ಯಿತಿ ವ್ಯಾಪ್ತಿಯ ಕೆಎಸ್ ರಾವ್ ನಗರ ವಿದ್ಯುತ್ ಸಬ್ ಸ್ಟೇಷನ್ ನಿಂದ ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ಸ್ಥಾಪಿತವಾದ ಐಡಿಯಲ್ ಐಸ್ಕ್ರೀಮ್ ಪ್ಲಾಂಟ್ ಗೆ ಸ್ಥಳೀಯ ನಾಗರಿಕರ ವಿರೋಧದ ನಡುವೆ ಅವೈಜ್ಞಾನಿಕ ರೀತಿಯಲ್ಲಿ 33 ಕೆವಿ ವಿದ್ಯುತ್ ಲೈನ್ ಭೂಗತ ಕೇಬಲ್ ಅಳವಡಿಸಿದ್ದು ಮುಲ್ಕಿಯ ಕೆಎಸ್ ರಾವ್ ನಗರದಲ್ಲಿ ರಸ್ತೆ ಹೊಂಡಮಯ ವಾಗಿ ಸಂಚಾರ ದುಸ್ತರವಾಗಿದೆ.
ಕೆ ಎಸ್.ರಾವ್ ನಗರ ಪವರ್ ಸ್ಟೇಷನ್ ಬಳಿ ಹಾಗೂ ರೈಲ್ವೆ ಸ್ಟೇಷನ್ ರಸ್ತೆಯ ರಿಕ್ಷಾ ನಿಲ್ದಾಣದ ಬಳಿ ಭೂಗತ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಲು ರಸ್ತೆ ಅಗೆತ ಮಾಡಿ ಬಳಿಕ ಸಿಮೆಂಟ್ ತೇಪೆ ಹಾಕಿದ್ದು ಮಳೆಗಾಲದಲ್ಲಿ ಕಳಪೆ ಕಾಮಗಾರಿಯಿಂದ ಸಿಮೆಂಟ್ ಎದ್ದುಹೋಗಿ ಬೃಹದಾಕಾರದ ಹೊಂಡ ಉಂಟಾಗಿ ಮಳೆ ನೀರು ಹೋಗುವ ಕೃತಕ ಚರಂಡಿ ನಿರ್ಮಾಣವಾಗಿದೆ.
ಭೂಗತ ಕೇಬಲ್ ಕಾಮಗಾರಿ ಆರಂಭವಾಗುವಾಗ ಸ್ಥಳೀಯರ ಪ್ರತಿಭಟನೆ ಲೆಕ್ಕಿಸದೆ ಕಾಮಗಾರಿ ನಡೆಸಿದ್ದು ಇದೀಗ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಲಕ್ಷಣ ಕಾಣುತ್ತಿದೆ. ಸಾರ್ವಜನಿಕರ ದೂರಿನ ಅನ್ವಯ ರೈಲ್ವೆ ನಿಲ್ದಾಣ ರಸ್ತೆಯ ಕೆಂಚನಕೆರೆ ರಿಕ್ಷಾ ಪಾರ್ಕಿಂಗ್ ಬಳಿ ಕಿಲ್ಪಾಡಿ ಗ್ರಾಪಂ ವತಿಯಿಂದ. ಹೊಂಡಮಯ ರಸ್ತೆಗೆ ತಾತ್ಕಾಲಿಕವಾಗಿ ಮಣ್ಣು ಹಾಕಲಾಗಿದೆ. ಹಾಗೂ ಕಳಪೆ ಕಾಮಗಾರಿ ಬಗ್ಗೆ ಐಡಿಯಲ್ ಐಸ್ ಕ್ರೀಮ್ ಕಂಪೆನಿಯ ಆಡಳಿತಕ್ಕೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
Kshetra Samachara
24/09/2021 07:42 pm