ವರದಿ :ದಾಮೋದರ ಮೊಗವೀರ ನಾಯಕವಾಡಿ .
ಬೈಂದೂರು : ಕುಂದಾಪುರ ಇಂದು ತಹಸಿಲ್ದಾರ್ ಕಚೇರಿ ಎದುರುಗಡೆ ದೇಶದಲ್ಲಿ ಸರಕಾರಿ ಯೋಜನೆಯಲ್ಲಿ ದುಡಿಯುತ್ತಿರುವ 'ಸ್ಕೀಂ' ನೌಕರರು ಕಾಯಂ ನೌಕರರಾಗಿ ಸರಕಾರ ನೇಮಕ ಮಾಡಬೇಕೆಂದು ತಮ್ಮ ಬೇಡಿಕೆಗಳಿಗಾಗಿ ಕುಂದಾಪುರ ತಹಸಿಲ್ದಾರರ ಕಛೇರಿ ಎದುರು ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ನೌಕರರ ಸಂಘದ ಮುಖಂಡರು ಆದ ಜಯಶ್ರೀ ಮಾತನಾಡಿ ಅಕ್ಷರ ದಾಸೋಹ ನೌಕರರಿಗೆ ಕಳೆದ 4 ತಿಂಗಳಿಂದ ವೇತನ ಕೊಡದೇ ಸರಕಾರವೇ ಬಡ ಕಾರ್ಮಿಕ ವರ್ಗದವರನ್ನು ಶೋಷಣೆ ನಡೆಸುತ್ತಿದೆ .
ಹೌದು ವೇತನ ಪಡೆಯದೇ ಉಪವಾಸವಿದ್ದರೂ ನಾವು ಶಾಲೆಗಳಲ್ಲಿ ಸ್ವಚ್ಛತೆ, ಕೈ ತೋಟದ ಕೆಲಸ,ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಶಾಲಾ ಮುಖ್ಯಸ್ಥರು ಹೇಳುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೇವೆ.
ಆದರೆ ಕರೋನದ ಸಂಕಷ್ಟದ ಕಾಲದಲ್ಲೂ ಸರಕಾರಕ್ಕೆ ನಮ್ಮ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ದೂರಿದರು.
ಬಿಸಿಯೂಟ ನೌಕರರು ದಿನವಿಡೀ ಕೆಲಸ ಮಾಡಲು ಸಿದ್ಧರಿದ್ದೆವೆಂದು ಹಲವಾರು ಬಾರಿ ಮನವಿ ಮಾಡಿದರೂ ಸರಕಾರ ನೌಕರರನ್ನು ಶಾಲೆಗಳಲ್ಲಿ " ಡಿ" ಗ್ರೂಪ್ ನೌಕರರೆಂದು ನೇಮಕ ಮಾಡಿ ಖಾಯಂಗೊಳಿಸುತ್ತಿಲ್ಲ ಬಿಸಿಯೂಟ ನೌಕರರಿಗೆ ಎಲ್ಐಸಿ ಆಧಾರಿತ ಪಿಂಚಣಿ ಜಾರಿ ಮಾಡಬೇಕು, ಹಾಗೂ ಇಂಡಿಯನ್ ಲೇಬರ್ ಕಾನ್ಪರೇನ್ಸ್ 45 ನೇ ಹಾಗು 46 ನೇ ಅಧಿವೇಶನದ ಶಿಫಾರಸ್ಸಿನಂತೆ ಯೋಜನೆಯ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಟವೇತನ ರೂ.21000/- ನೀಡಬೇಕು, ಭವಿಷ್ಯನಿಧಿ,ಇಎಸ್ಐ ಜಾರಿ ಮಾಡಿ ನೌಕರರಿಗೆ ಸರಕಾರ ರಕ್ಷಣೆ ಒದಗಿಸಬೇಕು ಎಂದು ಹೇಳಿದರು.
ಈ ಸಂದರ್ಭ ಸಿಐಟಿಯು ತಾಲೂಕು ಸಂಚಾಲಕ ಎಚ್ ನರಸಿಂಹ ಮಾತನಾಡಿ;ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿದೆ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಿ ಕಾರ್ಮಿಕರ ದುಡಿಮೆಯನ್ನೆ ಕಸಿಯುತ್ತಿದೆ. ಐಸಿಡಿಎಸ್ ಗೆ ಅನುದಾನ ಕಡಿತ ಮಾಡಲಾಗುತ್ತಿದೆ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಕೃಷಿ ಕಾಯ್ದೆಗಳ ತಿದ್ದುಪಡಿಗಳು ಕಾರ್ಮಿಕ ವರ್ಗದ ಮೇಲೆಯೇ ಪರಿಣಾಮ ಬೀರಲಿದೆ ಎಂದರು.
ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು.ಪ್ರತಿಭಟನೆಯಲ್ಲಿ ನಾಗರತ್ನ, ಸಿಂಗಾರಿ, ಆಶಾ ತೆಕ್ಕಟ್ಟೆ, ಲತಾ ಹೊಸಂಗಡಿ . ದಾಸಭಂಡಾರಿ ಉಪಸ್ಥಿತರಿದ್ದರು.
ತಹಶಿಲ್ದಾರ್ ಕಿರಣ್ ಗೋರಯ್ಯ ಅವರ ಮೂಲಕ ಪ್ರಧಾನ ಮಂತ್ರಿ, ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
Kshetra Samachara
24/09/2021 03:15 pm