ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಬಳಿ ತ್ಯಾಜ್ಯ ಎಸೆತದಿಂದ ದುರ್ವಾಸನೆ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಗುಂಡಾಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೆಲ ದುಷ್ಕರ್ಮಿಗಳು ಅಕ್ರಮವಾಗಿ ತ್ಯಾಜ್ಯ ಬಿಸಾಡುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿರುವವರನ್ನು ಸಿಸಿ ಕ್ಯಾಮರಾ ಅಳವಡಿಕೆಯ ಮೂಲಕ ಪತ್ತೆಹಚ್ಚಿ ನ.ಪಂ. ಸದಸ್ಯ ಹರ್ಷರಾಜ ಶೆಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಮತ್ತೆ ಕೆಲ ದುಷ್ಕರ್ಮಿಗಳು ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿದ್ದು ತ್ಯಾಜ್ಯದ ರಾಶಿ ಕಾಣುತ್ತಿದ್ದು ರೋಗದ ಭೀತಿ ಎದುರಾಗಿದೆ.

ಇದೇ ಪರಿಸರದ ಇನ್ನೊಂದು ಕಡೆಯಲ್ಲಿ ಲಾರಿಯಿಂದ ಕ್ರಮವಾಗಿ ಕಬ್ಬಿನ ತ್ಯಾಜ್ಯಗಳ ರಾಶಿ ಹಾಕಿದ್ದು ಸ್ಥಳದಲ್ಲಿ ಮೀನಿನ ತ್ಯಾಜ್ಯ ನೀರು ಕೂಡ ಬಿಡಲಾಗುತ್ತಿದೆ.

ಈ ಬಗ್ಗೆ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ ಮಾತನಾಡಿ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವುದು ಗಮನಕ್ಕೆ ಬಂದಿದ್ದು ಸಿಸಿ ಕ್ಯಾಮೆರಾ ಮೂಲಕ ಪರಿಶೀಲಿಸಿ ತ್ಯಾಜ್ಯ ಬಿಸಾಡುವವರ ವಿರುದ್ದ ಮೂಲ್ಕಿ ಠಾಣೆಗೆ ದೂರು ನೀಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

23/09/2021 04:24 pm

Cinque Terre

6.6 K

Cinque Terre

0

ಸಂಬಂಧಿತ ಸುದ್ದಿ