ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಜಂಕ್ಷನ್ ಬಳಿ ಕಳೆದ ವರ್ಷಗಳ ಹಿಂದೆ ಅಳವಡಿಸಿದ್ದ ಹೈಮಾಸ್ಟ್ ದಾರಿದೀಪ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಕಗ್ಗತ್ತಲೆಯಿಂದ ಪ್ರಯಾಣ ದುಸ್ತರವಾಗಿದೆ ಹಾಗೂ
ಮುಲ್ಕಿ ನ.ಪಂ.ನ ಕಾರ್ನಾಡು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ದಿನವೊಂದಕ್ಕೆ ಸಾವಿರಾರು ಪ್ರಯಾಣಿಕರು, ಕೈಗಾರಿಕಾ ಸಂಸ್ಥೆಯ ನೌಕರರು, ನಡೆದಾಡುವ ಕೊಲ್ನಾಡು ಬಸ್ಸು ನಿಲ್ದಾಣದಲ್ಲಿ ಅಳವಡಿಸಿರುವ ಹೈಮಾಸ್ಟ್ ದಾರಿದೀಪ ಕೆಟ್ಟುಹೋಗಿದೆ.
ಕೊಲ್ನಾಡು ಜಂಕ್ಷನ್ ಬಳಿ ರಿಕ್ಷಾ ನಿಲ್ದಾಣ, ಪೆಟ್ರೋಲ್ ಬಂಕ್, ಬ್ಯಾಂಕ್ ಉದ್ಯಮ ಸಹಿತ ಜನನಿಬಿಡ ಪ್ರದೇಶವಾಗಿದ್ದು ಹೈಮಾಸ್ ದಾರಿದೀಪದ ಅವ್ಯವಸ್ಥೆಯಿಂದ ಸ್ಥಳೀಯ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ.
ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ಗಮನಹರಿಸಿ ಸರಿಪಡಿಸಬೇಕು ಎಂಬ ಸರಿಯ ರಿಕ್ಷಾ ಚಾಲಕರ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಚಂದ್ರಪೂಜಾರಿ ಹೈಮಾಸ್ಟ್ ದೀಪ ದುರಸ್ತಿ ಪಡಿಸಿದ್ದಾರೆ..
ಹೈಮಾಸ್ಟ್ ದೀಪ ದುರಸ್ತಿ ಪಡಿಸಿ ರಿಕ್ಷಾ ಚಾಲಕರಿಂದ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಚಂದ್ರಪೂಜಾರಿ ಹಾಗೂ ವರದಿ ಪ್ರಕಟಿಸಿ ಕಣ್ಣು ತೆರೆಸಿದ ಪಬ್ಲಿಕ್ ನೆಕ್ಸ್ಟ್ ಗೆ ರಿಕ್ಷಾ ಚಾಲಕ ಉಮೇಶ್ ಕೊಲ್ನಾಡು ಧನ್ಯವಾದ ಅರ್ಪಿಸಿದ್ದಾರೆ.
Kshetra Samachara
20/09/2021 10:31 pm