ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುಪಣಂಬೂರು ತೋಕೂರು, ಕಿನ್ನಿಗೋಳಿ-ಕಟೀಲು ಸಂಪರ್ಕ ಕಲ್ಪಿಸುವ ನೂತನ ಕಲ್ಲಾಪು ಸೇತುವೆಯಲ್ಲಿ ಬೃಹದಾಕಾರದ ಹೊಂಡ ನಿರ್ಮಾಣವಾಗಿದ್ದು ಸಂಚಾರ ದುಸ್ತರವಾಗಿದೆ.
ಕಳೆದ ವರ್ಷದ ಹಿಂದೆ ಕಲ್ಲಾಪು ಹಳೆ ಸೇತುವೆ ಕುಸಿತವಾದ ಕಾರಣ ಸುಮಾರು 10 ಲಕ್ಷ ರುಪಾಯಿ ವೆಚ್ಚದ ಶಾಸಕರ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣ ವಾಗಿತ್ತು.
ಆದರೆ ನೂತನ ಸೇತುವೆ ಕಾಮಗಾರಿ ಇಂಜಿನಿಯರ್ ಗಳ ನಿರ್ಲಕ್ಷದಿಂದ ಅವೈಜ್ಞಾನಿಕವಾಗಿ ನಡೆದಿದ್ದು ಮತ್ತಷ್ಟು ಕಿರಿದಾಗಿ ಸಂಚಾರ ದುಸ್ತರವಾಗಿದೆ.
ಈ ನಡುವೆ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸೇತುವೆ ಇಕ್ಕೆಲಗಳಲ್ಲಿ ಬ್ರಹದಾಕಾರದ ಹೊಂಡಗಳು ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಸೇತುವೆಯ ನಡುವಿನಲ್ಲಿ ಸಿಮೆಂಟಿನ ಸ್ಲಾಬ್ ಹಾಗೂ ರಸ್ತೆಯ ನಡುವಿನ ಅಂತರ ಬೃಹದಾಕಾರವಾಗಿ ಗೋಚರಿಸುತ್ತಿದ್ದು ದ್ವಿಚಕ್ರ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಭಾರಿ ಮಳೆಗೆ ಬೃಹದಾಕಾರದ ಹೊಂಡ ಗುಂಡಿಯಲ್ಲಿ ನೀರು ನಿಂತು ನೂತನ ಸೇತುವೆ ಇಕ್ಕೆಲಗಳು ಕುಸಿತದ ಭೀತಿ ಎದುರಿಸುತ್ತಿದೆ
ಈ ಬಗ್ಗೆ ನಾಗರಿಕರು ಪಡುಪಣಂಬೂರು ಪಂಚಾಯತ್ ದೂರು ನೀಡಿದ್ದರೂ ಅಪಾಯಕಾರಿ ಹೊಂಡ ಮುಚ್ಚುವ ಕೆಲಸವಾಗಿಲ್ಲ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಸಕರು ಎಚ್ಚೆತ್ತು ಅಪಾಯ ಸಂಭವಿಸುವ ಮೊದಲೇ ಸೇತುವೆಯ ಇಕ್ಕೆಲಗಳನ್ನು ದುರಸ್ತಿ ಪಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ
Kshetra Samachara
17/09/2021 10:09 am