ಬಜಪೆ:ಬಜಪೆಯಿಂದ ಕೈಕಂಬ ಕ್ಕೆ ಸಾಗುವಂತಹ ರಸ್ತೆಯ ಬಜಪೆ ಪೊಲೀಸ್ ಠಾಣೆ ಸಮೀಪ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.ಬಜಪೆ ಪೊಲೀಸ್ ಠಾಣೆಯ ಸಮೀಪದಲ್ಲೇ ಈ ಬೃಹತ್ ಗಾತ್ರದ ಹೊಂಡವೊಂದು ಸೃಷ್ಟಿಯಾಗಿದ್ದು,ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಬೃಹತ್ ಗಾತ್ರದ ಹೊಂಡವನ್ನು ಮುಚ್ಚುವಂತಹ ಕಾರ್ಯಕ್ಕೆ ಇನ್ನೂ ಮುಂದಾಗಲಿಲ್ಲ.
ದ್ವಿಚಕ್ರ ವಾಹನ ಸವಾರ ರಂತೂ ಪಾಡಂತು ಹೇಳತೀರದು. ಬಜಪೆ ವಿಮಾನ ನಿಲ್ದಾಣಕ್ಕೆ ಸಾಗುವಂತಹ ಜಂಕ್ಷನ್ ನ ತಿರುವಿನಲ್ಲಿಯೇ ಹೊಂಡವಿದ್ದು,ಕೈಕಂಬ ಹಾಗೂ ಬಜಪೆ ಕಡೆಯಿಂದ ಬರುವಂತಹ ವಾಹನಗಳು ಈ ಜಂಕ್ಷನ್ ನ ಮೂಲಕವೇ ವಿಮಾನ ನಿಲ್ದಾಣ ರಸ್ತೆಗೆ ತೆರಳ ಬೇಕಾಗುತ್ತದೆ . ಸಣ್ಣ ಪುಟ್ಟ ಅವಘಡಗಳು ಸಂಭವಿಸಿತ್ತಾದರೂ ಬೃಹತ್ ಗಾತ್ರದ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಇನ್ನೂ ಕೂಡ ಸಂಬಂಧಪಟ್ಟವರು ಮುಂದಾಗಲಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಬೃಹತ್ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
16/09/2021 04:35 pm