ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರ್ಮಿಕ ಕಟ್ಟಡ ತೆರವು : ಲಿಸ್ಟ್ ನಲ್ಲಿ ಮಂಗಳೂರಿನ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನ...

ಮಂಗಳೂರು: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ಧಾರ್ಮಿಕ ಕಟ್ಟಡ ತೆರವಿಗೆ ಲಿಸ್ಟ್ ರೆಡಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು ಹಾಗೂ 56 ಚರ್ಚ್‌ಗಳನ್ನು, 11 ಧಾರ್ಮಿಕ ಕಟ್ಟಡಗಳು ಅನಧಿಕೃತ ಕಟ್ಟಡ ಎಂದು ಗುರುತಿಸಲಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ 2009 ರ ಹಿಂದಿನ ಅನಧಿಕೃತ ಕಟ್ಟಡಗಳ ಮಾಹಿತಿಯನ್ನು ಜಿಲ್ಲಾಡಳಿತ ಸರ್ವೆ ಮೂಲಕ ಕ್ರೋಢೀಕರಿಸಿದೆ.ಇದರಲ್ಲಿ ದೇವಸ್ಥಾನಗಳು-667,ಮಸೀದಿಗಳು-186,ಚರ್ಚ್ 56 ಇತರೆ ಧಾರ್ಮಿಕ ಕಟ್ಟಡಗಳು 11ಇವೆ. ಮಂಗಳೂರಿನ ಶಕ್ತಿನಗರದಲ್ಲಿರುವ 700 ವರ್ಷಗಳ ಹಿಂದಿನ‌ ದೈವಸ್ಥಾನದ ಹೆಸರು ತೆರವು ಪಟ್ಟಿಯಲ್ಲಿದೆ.

ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನ ಆಡಳಿತ ಮಂಡಳಿಗೆ ಇನ್ನೂ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ.ಹೀಗೆ ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 400 ಕಟ್ಟಡಗಳು ರೆಗ್ಯುಲೈಸ್ಡ್ ಆಗುವ ಸಾಧ್ಯತೆ ಇದೆ.

Edited By : Nirmala Aralikatti
Kshetra Samachara

Kshetra Samachara

14/09/2021 02:44 pm

Cinque Terre

10.53 K

Cinque Terre

6