ಕಾಪು : ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕೊಡಿ ನದಿ ಪಕ್ಕದಲ್ಲಿ ಕೋಳಿಯ ತ್ಯಾಜ್ಯ ಸಹಿತ ಮನೆಗಳ ತ್ಯಾಜ್ಯವನ್ನು ಸಾರ್ವಜನಿಕರು ಎಸೆದು ಹೋಗುತ್ತಿದ್ದು ಈ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯ ದಿವೇಶ್ ಶೆಟ್ಟಿ ಸ್ಥಳೀಯರ ಸಹಕಾರದಿಂದ ಕಸವನ್ನು ಯಾರು ಎಸೆದು ಹೋಗುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ತ್ಯಾಜ್ಯ ಹಾಕಬಾರದೆಂದು ತಿಂಗಳ ಹಿಂದೆ ಇನ್ನಂಜೆ ಗ್ರಾಮ ಪಂಚಾಯತ್ ತಾಕೀತು ಮಾಡಿತ್ತು.ಕೆಲವು ದಿನಗಳ ಹಿಂದೆ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸುವ ಎಚ್ಚರಿಕೆಯ ಮಧ್ಯೆಯೂ ಓರ್ವ ತ್ಯಾಜ್ಯ ಎಸೆಯುವಾಗಲೇ ಸಿಕ್ಕಿಕೊಂಡಿದ್ದು, ಆತನಿಂದ ಎಲ್ಲಾ ತ್ಯಾಜ್ಯವನ್ನು ತೆರವುಗೊಳಿಸಿ ದಂಡವನ್ನು ವಿಧಿಸಲಾಗಿತ್ತು.
ಇದೀಗ ಮತ್ತೆ ತ್ಯಾಜ್ಯವನ್ನು ಎಸೆದು ಹೋದವರ ಬಗ್ಗೆ ತ್ಯಾಜ್ಯದಲ್ಲಿ ಮಾಹಿತಿ ಸಂಗ್ರಹವನ್ನು ಮಾಡಲಾಗಿದ್ದು, ಕಾಪು ಪೊಲೀಸರ ಸಹಕಾರ ದಿಂದ ಅವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯ ದಿವೇಶ್ ಶೆಟ್ಟಿ ತಿಳಿಸಿದ್ದಾರೆ
ಈ ಸಂದರ್ಭ ಉಮೇಶ್ ಅಂಚನ್ ಮಂಡೇಡಿ, ದಿನೇಶ್ ಪೂಜಾರಿ ಕಲ್ಯಾಲು ಮತ್ತಿತರರು ಉಪಸ್ಥಿತರಿದ್ದರು
Kshetra Samachara
11/09/2021 03:43 pm