ಬಜಪೆ : ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕಾರು ಬೇಡೆ ಮುಗೇರಬೆಟ್ಟು,ಬೇಡೆಗೆ ಸಂಪರ್ಕಿಸುವ ರಸ್ತೆಯು ತೀರ ಹದಗೆಟ್ಟಿದ್ದುಸ್ಥಳೀಯರಿಗೆ ದಿನನಿತ್ಯ ಓಡಾಟ ನಡೆಸಲು ತೀರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಈ ಪ್ರದೇಶದಲ್ಲಿ ಹೆಬ್ಬಾವು, ಕಾಡುಕೋಣ, ಚಿರತೆಯ ಹಾವಳಿಯು ಜಾಸ್ತಿಯಾಗಿರುವುದರಿಂದ ಇಲ್ಲಿ ರಾತ್ರಿ ಹೊತ್ತಿನಲ್ಲಿ ಸಂಚರಿಸಲು ಕಷ್ಟಕರವಾಗಿದೆ.
ರಸ್ತೆಯ ದುರಾವಸ್ಥೆಯಿಂದಾಗಿ ಜನರು ಅನುಭವಿಸುವ ಸಂಕಷ್ಟ ನಿನ್ನೆ ಮೊನ್ನೆಯದಲ್ಲ ಕೆಲ ವರುಷಗಳಿಂದಲೇ ಅನುಭವಿಸಿಕೊಂಡು ಬಂದಿದ್ದು, ಸುಮಾರು 60 ವರುಷಕ್ಕೂ ಹಳೆಯದಾದ ರಸ್ತೆಯಾಗಿದೆ ಎಂದು ಹೇಳುತ್ತಾರೆ ಸ್ಥಳೀಯ ಗ್ರಾಮಸ್ಥರು. ಮಣ್ಣಿನ ರಸ್ತೆ ನಿರ್ಮಾಣವಾಗಿ ಸುಮಾರು ಆರುವತ್ತು ವರ್ಷಗಳಾದರೂ ಇನ್ನೂ ಕೂಡಾ ಡಾಮರೀಕರಣ ಗೊಂಡಿಲ್ಲ.
ರಸ್ತೆಯ ಒಂದು ಭಾಗ ಮಾತ್ರ ಕಾಂಕ್ರೀಟಿಕರಣ ಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ರಸ್ತೆಯ ಅನತಿ ದೂರದಲ್ಲಿ ಚಿರತೆಯು ಸಾಕುನಾಯಿಯನ್ನು ಹೊತ್ತುಕೊಂಡು ಹೋಗುವ ದೃಶ್ಯವು ಜಾಲತಾಣದಲ್ಲಿ ವೈರಲ್ ಆಗಿತ್ತು. ಸಂಬಂಧಪಟ್ಟವರು ಹದಗೆಟ್ಟ ರಸ್ತೆಯನ್ನು ಶೀಘ್ರವೇ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
11/09/2021 11:10 am