ಮಂಗಳೂರು: ಮಹಾನಗರ ಪಾಲಿಕೆಯ 60ನೇ ವಾರ್ಡ್ ವ್ಯಾಪ್ತಿಯ ತೋಟ ಬೆಂಗ್ರೆ ನದಿ ಕಿನಾರೆಯಲ್ಲಿ ನಾಡದೋಣಿಗಳ ತಂಗುವಿಕೆಗೆ ಪ್ರತ್ಯೇಕ ಜೆಟ್ಟಿ ನಿರ್ಮಾಣ ಯೋಜನೆ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಮೀನುಗಾರಿಕೆ ಇಲಾಖೆಯ ನಬಾರ್ಡ್ 24ರ ಯೋಜನೆಯಡಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. 3.37 ಕೋಟಿ ರೂ. ವೆಚ್ಚದ ಈ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತು, ತಾಂತ್ರಿಕ ಮಂಜೂರಾತಿಯನ್ನೂ ಪಡೆಯಲಾಗಿದೆ. ಮಳೆ ಅವಧಿ ಪೂರ್ಣವಾಗಿ ಮುಗಿದ ನಂತರ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
ಬೆಂಗ್ರೆ ಪ್ರದೇಶದಲ್ಲಿ ನಡೆಯುತ್ತಿರುವ 3ನೇ ಮೀನುಗಾರಿಕೆ ಜೆಟ್ಟಿಯ ಸನಿಹಕ್ಕೆ ಹೊಂದಿಕೊಂಡ ಭಾಗದಲ್ಲಿ ನಾಡದೋಣಿಗಳ ನಿಲುಗಡೆಯ ಹೊಸ ಜೆಟ್ಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಸದ್ಯ ಬೆಂಗ್ರೆ ಪರಿಸರದಲ್ಲಿ ಸುಮಾರು 300ಕ್ಕೂ ಅಧಿಕ ಮೀನುಗಾರಿಕೆ ನಾಡದೋಣಿಗಳಿವೆ.
Kshetra Samachara
07/09/2021 01:17 pm