ಮುಲ್ಕಿ: ಜೇಸಿಐ ಮುಲ್ಕಿ ಶಾಂಭವಿ ಮತ್ತು ಶ್ರೀ ರಾಮಾ ಸೇವಾ ಮಂಡಳಿ, ಕಾರ್ನಾಡು ಇವರ ಜಂಟಿ ಆಶ್ರಯದಲ್ಲಿ, ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಅಂಗಾರಗುಡ್ಡೆ ಬಸ್ ನಿಲ್ದಾಣದಿಂದ ಕುಕ್ಕುದಕಟ್ಟೆ ಬಸ್ ನಿಲ್ದಾಣದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಜೇಸಿಐನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಶ್ರೀ ರಾಮಾ ಸೇವಾ ಮಂಡಳಿಯ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಮತ್ತು ಸದಸ್ಯರುಗಳಾದ ಮಾಧವ ಪೂಜಾರಿ ಕುಬೆವೂರು, ಗಣೇಶ್ ಭಂಡಾರಿ ಕುಬೆವೂರು ಮತ್ತು ಭಾಸ್ಕರ ಪೂಜಾರಿ ಕುಬೆವೂರು ಶ್ರಮದಾನ ಯಶಸ್ವಿಗೊಳಿಸಿದರು.
Kshetra Samachara
05/09/2021 04:20 pm