ಬಜಪೆ: ಬಜಪೆ ಸಮೀಪದ ಸುಂಕದಕಟ್ಟೆಯಿಂದ ಪಡೀಲು - -ಭಟ್ರಕೆರೆಗೆ ಸಾಗುವಂತಹ ರಸ್ತೆಯ ಅಂಚಿನ ಉದ್ದಕ್ಕೂ ಕಸಗಳ ರಾಶಿ ರಾಶಿ ತುಂಬಿ ಹೋಗಿದ್ದು,ಗಬ್ಬುನಾಥ ಬೀರುತ್ತಿದೆ.ಸುಂಕದಕಟ್ಟೆಯಿಂದ ಪಡೀಲು ಮೂಲಕ ಭಟ್ರಕೆರೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು,ಕೈಕಂಬ ಕಡೆಯಿಂದ ಕಟೀಲು ಹಾಗೂ ಇತರ ಕಡೆಗಳಿಗೆ ಬರುವಂತಹ ವಾಹನ ಸವಾರ ರಿಗೆ ಹತ್ತಿರದ ರಸ್ತೆಯಾಗಿದೆ.ಇದೀಗ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರು ಮೂಗು ಮುಚ್ಚಿಕೊಂಡೆ ಸಂಚಾರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.ಕಳೆದ ಹಲವು ತಿಂಗಳುಗಳಿಂದ ಕಸಗಳನ್ನು ತಂದು ರಸ್ತೆಯ ಅಂಚುಗಳ ಲ್ಲಿಯೇಹಾಕುತ್ತಿದ್ದು,ಕಸ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
ಅಲ್ಲದೆ ರಸ್ತೆಗೆ ಅಂಚಿ ನಲ್ಲಿಯೇ ಕಸಗಳನ್ನು ಎಸೆಯುದರಿಂದ ಪಕ್ಕದಲ್ಲಿನ ಚರಂಡಿಗಳು ಕೂಡ ಕಸದಿಂದ ತುಂಬಿಹೋಗಿದೆ.ಕಸಗಳು ಕೊಳೆತ ಪರಿಣಾಮವಾಗಿ ಸಮೀಪದಲ್ಲಿನ ಮನೆಗಳ ಜನರಿಗೂ ಗಬ್ಬುನಾಥ ಬೀರುತ್ತಿದೆ.ಈ ಬಗ್ಗೆ ಸಂಬಂಧಪಟ್ಟವರು ಸಾರ್ವಜನಿಕರ ಸಹಕಾರದೊಂದಿಗೆ ಕಸ ಎಸೆಯುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮವನ್ನು ಜರುಗಿಸುದರ ಜೊತೆಗೆ ಕಸವನ್ನು ವಿಲೇವಾರಿ ಮಾಡಬೇಕಿದೆ ಎಂಬುವುದು ಸ್ಥಳೀಯರ ಆಗ್ರಹ.
Kshetra Samachara
04/09/2021 07:06 pm