ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ.ಜಿಲ್ಲೆಯಿಂದ ಕೇರಳಕ್ಕೆ ನಡೆಯುತ್ತಿರುವ ಮರಳು ಸಾಗಾಟಕ್ಕೆ ಕೋವಿಡ್ ನಿಯಮಾವಳಿ ಅನ್ವಯವಾಗುತ್ತಿಲ್ಲವೇ: ಖಾದರ್ ಪ್ರಶ್ನೆ

ಮಂಗಳೂರು: ದ.ಕ.ಜಿಲ್ಲಾಡಳಿತ ಎಸ್ಒಪಿ ಮುಖೇನ ಕೇರಳದ ಗಡಿ ಕಾನೂನು ಜಾರಿಗೊಳಿಸಿದೆ. ಆದರೆ ಕಾನೂನು ಮರಳು ಸಾಗಾಟಕ್ಕೆ ಅನ್ವಯವಾಗುತ್ತಿಲ್ಲ. ನಿತ್ಯವೂ ಕೇರಳಕ್ಕೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಟ ನಡೆಸಲಾಗುತ್ತಿದೆ. ಹಾಗಾದರೆ ಇದಕ್ಕೆ ಕೋವಿಡ್ ನಿಯಮಗಳು ಅನ್ವಯವಾಗುತ್ತಿಲ್ಲವೇ, ಈ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿರುವುದೇಕೆ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಾಗಾಟ ಪರವಾನಿಗೆ ಇಲ್ಲದಿದ್ದರೂ ನಿತ್ಯವೂ ಕೇರಳಕ್ಕೆ ಮರಳು ಹೇಗೆ ಸಾಗಾಟ ಮಾಡಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ ಮರಳು ದೊರೆಯಬೇಕಾದಲ್ಲಿ 12-15 ಸಾವಿರ ರೂ. ನೀಡಬೇಕು. ಆದರೆ ಜಿಲ್ಲೆಯ ಗಡಿ ದಾಟಿ ಕೇರಳಕ್ಕೆ ಎಷ್ಟು ಲೋಡು ಮರಳು ಸಾಗಾಟ ಆಗುತ್ತದೆ. ಹಾಗಾದರೆ ಲಾರಿ ಚಾಲಕರಿಗೆ ಕೋವಿಡ್ ನಿಯಮಗಳಿಲ್ಲವೇ ಅಥವಾ ಲಾರಿ ಚಾಲಕರಿಗೆ ವಿಶೇಷ ಪರವಾನಿಗೆ ಜಾರಿಯಲ್ಲಿವೆಯೇ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ದ.ಕ.ಜಿಲ್ಲೆಯಲ್ಲಿ‌ ನಡೆಸಿರುವ ಕೋವಿಡ್ ಸಭೆಯಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ತುರ್ತು ಅಗತ್ಯತೆ ಎಂದು ಮಾಸ್ಕ್, ಗ್ಲೌಸ್, ಔಷಧ ವೆಚ್ಚವೆಂದು ಎಲ್ಲಾ ಆಸ್ಪತ್ರೆಗಳಿಗೂ ತಲಾ 2 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಎಸ್ ಸಿಆರ್ ಎಫ್ ಫಂಡ್ ನಿಂದ ಯಾವ ಹಣವೂ ಬಿಡುಗಡೆಯಾಗಿಲ್ಲ. ಹಾಗಾದರೆ ಈ ಹಣವೆಲ್ಲಿದೆ. ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಿರುವ ವಾಹನಗಳನ್ನು ನೀಡಿದವರಿಗೆ ಇನ್ನೂ ಹಣ ಬಿಡುಗಡೆ ಆಗಿಲ್ಲ. ಈಗ ಅವರು ವಾಹನಗಳಿಗೆ ಡೀಸೆಲ್‌ ತುಂಬಿಸಲು ಪಾಡು ಪಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೂ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಖಾದರ್ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

31/08/2021 09:58 pm

Cinque Terre

19.37 K

Cinque Terre

2

ಸಂಬಂಧಿತ ಸುದ್ದಿ