ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

ಬಜಪೆ:ಕೃಷಿ ವಿದ್ಯೆ ಅನ್ನುವುದು ಪ್ರಕೃತಿಯ ಜೊತೆ ಬೆರೆತು - ಅನುಭವಿಗಳ ಸಹವಾಸ, ಮಾರ್ಗದರ್ಶನದ ಮೂಲಕ ಸಿದ್ಧಿಸುವ ವಿದ್ಯೆ , ಪುಸ್ತಕದ ಶಿಕ್ಷಣ ಇದಕ್ಕೆ ಪೂರಕ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ" ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲೂಕು,ಪೊಳಲಿ ವಲಯದ ಆಶ್ರಯದಲ್ಲಿ ಕರಿಯಂಗಳ ಚಾರ್ಲಿ ಡಿ ಸೋಜ ಅವರ ಮನೆಯಲ್ಲಿ ನಡೆದ ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಜಯಾನಂದ. ಪಿ, ನಿರ್ದೇಶಕ ಸತೀಶ್ ಶೆಟ್ಟಿ, ಚಾರ್ಲಿ ಡಿಸೋಜ ದಂಪತಿ, ಒಕ್ಕೂಟ ಅದ್ಯಕ್ಷೆ ಪ್ರಮೀಳಾ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸಪ್ನಾ, ಸೇವಾ ಪ್ರತಿನಿಧಿ ಅಶ್ವಿನಿ , ಸ್ಥಳೀಯ ಆಸಕ್ತ ರೈತರು ಭಾಗವಹಿಸಿದ್ದರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಸ್ವಾಗತಿಸಿ, ಸೇವಾ ಪ್ರತಿನಿಧಿ ರೇಖಾ ಶೆಟ್ಟಿ ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

30/08/2021 01:28 pm

Cinque Terre

4.02 K

Cinque Terre

0

ಸಂಬಂಧಿತ ಸುದ್ದಿ