ಮಂಗಳೂರು: ಮಹಾನಗರ ಪಾಲಿಕೆಯಿಂದ ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ಇಂದು ಟೈಗರ್ ಕಾರ್ಯಾಚರಣೆ ನಡೆಯಿತು. ಈ ಸಂದರ್ಭ ಕಾರ್ಯಾಚರಣೆ ತಡೆದು ಬೀದಿ ಬದಿ ವ್ಯಾಪಾರಿಗಳು ಲಾರಿಯಡಿ ಮಲಗಿ ಪ್ರತಿಭಟನೆ ನಡೆಸಿದರು.
ನಿನ್ನೆ ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಟೈಗರ್ ಕಾರ್ಯಾಚರಣೆ ಸರಿಯಾಗಿ ನಡೆಯದ ಪರಿಣಾಮ ಫುಟ್ ಪಾತ್ ನಲ್ಲಿಯೇ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಮನಪಾ ಅಧಿಕಾರಿಗಳು ಟೈಗರ್ ಕಾರ್ಯಾಚರಣೆ ನಡೆಸಿ ಬೀದಿ ಬದಿ ವ್ಯಾಪಾರ ನಡೆಸುವವರನ್ನು ತೆರವು ಮಾಡುವ ಕಾರ್ಯಾಚರಣೆ ಕೈಗೊಂಡಿದ್ದರು.
ಆದರೆ ಕಾರ್ಯಾಚರಣೆ ವೇಳೆಯಲ್ಲಿ ಮನಪಾದ ಲಾರಿಯನ್ನು ತಡೆದು ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ಕೆಲ ಪ್ರತಿಭಟನಾಕಾರರು ಮನಪಾ ಲಾರಿ ಟಯರ್ ನಡಿ ಭಾಗದಲ್ಲಿ ಮಲಗಿ, ಲಾರಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ನಡೆಸಿ, ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ತೆರವು ಮಾಡಲು ಮನವಿ ಮಾಡಿದರು.
Kshetra Samachara
28/08/2021 04:20 pm