ಮಂಗಳೂರು: ಹಿಂದೂ ಸಮಾವೇಶವೆಂದರೆ ಭಾರೀ ಜನಸ್ತೋಮ, ಎಲ್ಲೆಡೆ ಕೇಸರಿಮಯ, ಭಗವಾಧ್ವಜಗಳ ಹಾರಾಟದ ದೃಶ್ಯವು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ ಇದೇ ಮೊದಲ ಬಾರಿಗೆ ದೃಶ್ಯವಿಲ್ಲದೆ ಬರೀ ಶ್ರವ್ಯದ ಮೂಲಕ ಹಿಂದೂ ಸಮಾವೇಶ ನಡೆಯುತ್ತದೆ. ಇದೇನೆಂದು ಯೋಚನೆ ಮಾಡುತ್ತಿದ್ದೀರಾ, ಇದೇ ಮೊದಲ ಬಾರಿಗೆ ಕ್ಲಬ್ ಹೌಸ್ ನಲ್ಲಿ 'ಹಿಂದೂ ಸಮಾವೇಶ' ಆಯೋಜನೆಗೊಂಡಿದೆ. ಈ ಮೂಲಕ ಬರೀ ಶ್ರವ್ಯದ ಮೂಲಕ 'ವಿರಾಟ್ ಹಿಂದೂ ಸಮಾವೇಶ -01' ನಡೆಯಲಿದೆ.
'ಟೀಮ್ ಹಿಂದುತ್ವ'ದ ಆಶ್ರಯದಲ್ಲಿ ಆ.30ರಂದು ರಾತ್ರಿ 7.30ಕ್ಕೆ ಕ್ಲಬ್ ಹೌಸ್ ನಲ್ಲಿ 'ವಿರಾಟ್ ಹಿಂದೂ ಸಮಾವೇಶ-01' ನಡೆಯಲಿದೆ. ಆರ್ ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವ ವಹಿಸಲಿದ್ದಾರೆ. ಅವರು ಅಂದು ಹಿಂದೂ ಸಮಾಜದ ಏಳು-ಬೀಳು, ಭವಿಷ್ಯದಲ್ಲಿ ಹಿಂದೂ ಸಮಾಜದ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಸಾನಿಧ್ಯವಿರಲಿದೆ. ಅಂಕಣಕಾರ ರೋಹಿತ್ ಚಕ್ರತೀರ್ಥ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ಖ್ಯಾತ ಗಾಯಕಿ ರಮ್ಯಾ ವಶಿಷ್ಠ ಅವರಿಂದ ವಂದೇ ಮಾತರಂ ಗಾಯನ ನಡೆಯಲಿದೆ.
Kshetra Samachara
28/08/2021 12:16 pm