ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮದ 3 ಮತ್ತು 4 ವಾರ್ಡ್ ನ ರಸ್ತೆಯಲ್ಲಿ ಡಾಂಬರೀಕರಣವಾಗಿತ್ತು ಅನ್ನುವುದಕ್ಕೆಯಾವ ಕುರುಹೂ ಇಲ್ಲ.ರಸ್ತೆಯ ಡಾಂಬರ್ ಕಿತ್ತು ಬಂದಿದ್ದು ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ದಾರಿ ಹೋಕರಿಗೆ, ಕೃಷಿ ಗದ್ದೆಯಲ್ಲಿ ನಡೆಯುತ್ತಿದ್ದೇವೋ ಅಥವಾ ರಸ್ತೆಯಲ್ಲಿ ಹೋಗುತ್ತಿದ್ದೆವೋ ಎನ್ನುವ ಅನುಮಾನ ಕಾಡುತ್ತದೆ.
ಈ ರಸ್ತೆ ವರ್ಷಗಳು ಕಳೆದರೂ ದುರಸ್ಥಿಯಾಗದಿದ್ದರಿಂದ ವಾಹನ ಸವಾರರು ಆ ರಸ್ತೆಯಲ್ಲಿ ಸಂಚಾರಿಸಲು ಹರಸಾಹಸ ಪಡುವಂತಾಗಿದೆ. ಅಂದಹಾಗೆ ಇದು ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಗೆ ತಾಗಿಕೊಂಡಿರುವ ರಸ್ತೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುಸ್ಥಿತಿ ಮಳೆ ಬಂದರಂತೂ ಕೇಳುವುದೇ ಬೇಡ! ಬಿಜೂರು, ತಗ್ಗರ್ಸೆ, ಮೂರ್ಗೂಳಿ ಹಕ್ಲು ಗ್ರಾಮಗಳ ಜನರು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ.ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
Kshetra Samachara
26/08/2021 06:59 pm