ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪಬ್ಲಿಕ್ ನೆಕ್ಸ್ಟ್ ವರದಿ ಇಂಪ್ಯಾಕ್ಟ್: ಅಪಾಯಕಾರಿ ತಿರುವಿನಲ್ಲಿ ಕೆಲಸ ಆರಂಭ

ಬಂಟ್ವಾಳ: ಬಿ.ಸಿ.ರೋಡಿನಿಂದ ಮೂಡುಬಿದಿರೆಗೆ ತೆರಳುವ ರಸ್ತೆಯಲ್ಲಿ ಮಾಡಮೈನಿಂದ ಮುಂದೆ ಕರೆಂಕಿಜೆ ತಿರುವು ಅಪಾಯಕಾರಿಯಾಗಿರುವ ಕುರಿತು ಕಳೆದ ಮೂರು ದಿನಗಳ ಹಿಂದೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಪ್ರಕಟಗೊಂಡ ವರದಿ ಪರಿಣಾಮ ಬೀರಿದೆ. ಇದೀಗ ತಿರುವುಗಳಲ್ಲಿ ಹೊಂಡದ ಅಪಾಯಕಾರಿ ಭಾಗವನ್ನು ಮುಚ್ಚುವ ಹಾಗೂ ದುರಸ್ತಿಗೊಳಿಸುವ ಕಾರ್ಯ ಆರಂಭಗೊಂಡಿದೆ.

ಇಲ್ಲಿ ಹೆದ್ದಾರಿಯ ಒಂದು ಪಾರ್ಶ್ವ ಕುಸಿದುಬಿದ್ದು, ಕಂದಕವೊಂದು ನಿರ್ಮಾಣವಾಗಿರುವ ಕುರಿತು ವರದಿಯಲ್ಲಿ ಎಚ್ಚರಿಸಲಾಗಿತ್ತು. ಮಳೆಗಾಲವಾದ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಹತ್ತಿರ ಬರುವವರೆಗೆ ಗೋಚರಿಸುವುದಿಲ್ಲ ಎಂದು ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಕುಕ್ಕಿಪ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಪ್ರತಿಕ್ರಿಯಿಸಿದ್ದರು.ಈ ರಸ್ತೆಯಲ್ಲಿ ಸೈಡ್ ಕೊಡುವ ಸಂದರ್ಭ ಪಕ್ಕಕ್ಕೇನಾದರೂ ವಾಹನಗಳು ಬಂದರೆ ಕಂದಕಕ್ಕೆ ಉರುಳುವ ಭೀತಿ ಇದ್ದು, ಅನಾಹುತಗಳು ಸಂಭವಿಸುವ ಮುನ್ನ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದರು.

Edited By : Shivu K
Kshetra Samachara

Kshetra Samachara

25/08/2021 05:13 pm

Cinque Terre

26.15 K

Cinque Terre

0

ಸಂಬಂಧಿತ ಸುದ್ದಿ