ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಎಸ್ ಕೋಡಿ ಜಂಕ್ಷನ್ ಬಳಿ ಬಹು ಗ್ರಾಮದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು ಕೃತಕ ಕೆರೆ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು ಹೆದ್ದಾರಿಯಲ್ಲಿ ಹೊಂಡ ಉಂಟಾಗಿ ಕಾರಂಜಿಯಂತೆ ನೀರು ಚಿಮ್ಮುತ್ತಿದ್ದು ಅತಿವೇಗದಿಂದ ಹೆದ್ದಾರಿಯಲ್ಲಿ ಬರುವ ವಾಹನಗಳ ಚಾಲಕರು ಅರಿವಿಲ್ಲದೆ ಹೊಂಡಕ್ಕೆ ಬಿದ್ದು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಗೋಚರಿಸುತ್ತಿದೆ.
ಕಿನ್ನಿಗೋಳಿ-ಕಟೀಲು ಮುಲ್ಕಿ ಮಂಗಳೂರು ರಾಜ್ಯ ಹೆದ್ದಾರಿಯ ಪ್ರಮುಖ ಕೇಂದ್ರ ಎಸ್ ಕೋಡಿ ಜಂಕ್ಷನ್ ಆಗಿದ್ದು ಸಾವಿರಾರು ಪ್ರಯಾಣಿಕರು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಕಿನ್ನಿಗೋಳಿ ಕಡೆಗೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರು ಬಸ್ಸಿಗೆ ಕಾಯುತ್ತಿರುವಾಗ ವಾಹನಗಳ ಚಕ್ರಗಳು ಕೊಂಡಕ್ಕೆ ಸಿಲುಕಿ ಪುಕ್ಕಟೆಯಾಗಿ ನೀರಿನ ಸಿಂಚನವಾಗುತ್ತಿದೆ.
ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್ ಹಾನಿಯಾಗಿ ನೀರು ಪೋಲಾಗುತ್ತಿದೆ ಎಂದು ಮಾಜೀ ಪಂಚಾಯತ್ ಸದಸ್ಯ ರವೀಂದ್ರ ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರು ಗಮನಿಸಿ ಸರಿಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ
Kshetra Samachara
25/08/2021 04:44 pm