ಉಡುಪಿ: ಉಡುಪಿಯ ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಖಾಸಗಿ ಜಾಗದ ಮಾಲಕರು ರಸ್ತೆಗೆ ಅಡ್ಡಲಾಗಿ ತಡೆಯೊಡ್ಡಿರುತ್ತಾರೆ. ಸ್ಥಳೀಯರ ಬೇಡಿಕೆಯಂತೆ ಈ ಸಂಬಂಧ ಶಾಸಕ ಕೆ. ರಘುಪತಿ ಭಟ್ ಇಂದು ದಿನಾಂಕ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್, ಉಪಾಧ್ಯಕ್ಷರಾದ ಸುಜಾತ ಯು ಶೆಟ್ಟಿ, ಸದಸ್ಯರಾದ ಉದಯ್ ಕೋಟ್ಯಾನ್, ಗುರುರಾಜ್ ಹಾಗೂ ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಉಪ ನಿರೀಕ್ಷಕರಾದ ಗುರುನಾಥ್ ಹಾದಿಮನೆ, ಹಾವಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
24/08/2021 07:09 pm