ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಚರಂತಿಪೇಟೆ ಎಣ್ಣೆ ಮಿಲ್ಲಿನ ಬಳಿ ಕಳೆದ ಒಂದು ವಾರದ ಹಿಂದೆ ಮರವನ್ನು ಕಡಿದು ಚರಂಡಿಯಲ್ಲಿ ಹಾಕಿದ್ದು ತೆರವುಗೊಳಿಸಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಕಳೆದ ಒಂದು ವಾರದ ಹಿಂದೆ ಚರಂತಿಪೇಟೆ ಬಳಿ ಅಂಗಡಿ ಮಾಲಕರು ಏಕಾಏಕಿ ಕಾರ್ನಾಡು ಮುಲ್ಕಿ ರಾಜ್ಯ ಹೆದ್ದಾರಿ ತಡೆ ಮಾಡಿ ಸೊಗಸಾದ ಆಶ್ವತ ಮರವನ್ನು ಕಡಿದು ಹಾಕಿದ್ದರು.
ಚರಂತಿಪೇಟೆ ಬಳಿ ಅಂಗಡಿ ಮಾಲಕರ ನೂತನ ಕಟ್ಟಡ ರಚನೆಯಾಗುತ್ತಿದ್ದು ಅದಕ್ಕಾಗಿ ಮರವನ್ನು ಕಡಿದು ಹಾಕಿದ್ದಲ್ಲದೆ ವಿದ್ಯುತ್ ಕಂಬವನ್ನು ಅಳವಡಿಸಲು ಗಂಟೆಗಟ್ಟಲೆ ರಸ್ತೆ ತಡೆ ಮಾಡಿ ಸಾರ್ವಜನಿಕ ತೊಂದರೆ ಉಂಟು ಮಾಡಿದ್ದರು. ಇದರಿಂದಾಗಿ ವಾಹನ ಸವಾರರು ಪೆಟ್ರೋಲ್ ಬೆಲೆ ಏರಿಕೆ ನಡುವೆಯೇ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕಿ ಸುತ್ತು ಬಳಸಿ ಪ್ರಯಾಣಿಸಿ ದ್ದರು.
ಆದರೆ ಕಡಿದು ಹಾಕಿದ ಅಶ್ವತ್ಥ ಮರದ ಗೆಲ್ಲುಗಳು ಚರಂಡಿಯಲ್ಲಿ ಬಿದ್ದುಕೊಂಡಿದ್ದು ಭಾರಿ ಮಳೆಗೆ ಕೃತಕ ನೆರೆ ಭೀತಿ ಎದುರಾಗಿದೆ.
ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಕಟ್ಟಡ ಮಾಲೀಕರಿಗೆ ಸೂಚನೆ ನೀಡಿ ಮರದ ಗೆಲ್ಲುಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
Kshetra Samachara
22/08/2021 01:37 pm