ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮೂಡುಬಿದಿರೆ ತೆರಳುವ ಮಾರ್ಗದಲ್ಲಿ ಕಂದಕ: ಅಪಾಯಕ್ಕೆ ಆಹ್ವಾನ

ಬಂಟ್ವಾಳ: ಬಿ.ಸಿ.ರೋಡಿನಿಂದ ಮೂಡುಬಿದಿರೆಗೆ ತೆರಳುವ ರಸ್ತೆ ಅನೇಕ ತಿರುವುಗಳಿಂದ ಕೂಡಿದ್ದು, ಈ ಪೈಕಿ ಮಾಡಮೈನಿಂದ ಮುಂದೆ ಕರೆಂಕಿಜೆ ತಿರುವು ಅಪಾಯಕಾರಿಯಾಗಿದೆ.ಇಲ್ಲಿ ಹೆದ್ದಾರಿಯ ಒಂದು ಪಾರ್ಶ್ವ ಕುಸಿದುಬಿದ್ದು, ಕಂದಕವೊಂದು ನಿರ್ಮಾಣವಾಗಿದೆ.

ಮಳೆಗಾಲವಾದ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಹತ್ತಿರ ಬರುವವರೆಗೆ ಗೋಚರಿಸುವುದಿಲ್ಲ. ಈ ಕುರಿತು ಕುಕ್ಕಿಪ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಪ್ರತಿಕ್ರಿಯಿಸಿದ್ದು, ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ಕುಸಿದ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ರಸ್ತೆಯಲ್ಲಿ ಸೈಡ್ ಕೊಡುವ ಸಂದರ್ಭ ಪಕ್ಕಕ್ಕೇನಾದರೂ ವಾಹನಗಳು ಬಂದರೆ ಕಂದಕಕ್ಕೆ ಉರುಳುವ ಭೀತಿ ಇದ್ದು, ಅನಾಹುತಗಳು ಸಂಭವಿಸುವ ಮುನ್ನ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

21/08/2021 10:23 am

Cinque Terre

10.43 K

Cinque Terre

0