ಬಂಟ್ವಾಳ: ಕೃಷಿಭೂಮಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಬುಧವಾರ ವಿಟ್ಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಟುವಾಗಿ ವಿರೋಧ ವ್ಯಕ್ತಪಡಿಸಿರುವ ರೈತಮುಖಂಡರು, ಅಂಚೆ ಕಾರ್ಡ್ ಚಳವಳಿಗೆ ನಿರ್ಧರಿಸಿದ್ದಾರೆ. ಈ ಕುರಿತುಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತ ಪಡಿಸಲಾಗುವುದು. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ಚಳವಳಿಯನ್ನು ತಕ್ಷಣ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರೈತ ಹೋರಾಟ ಸಂಘದ ಅಧ್ಯಕ್ಷ ರಾಜೀವ ಗೌಡ ಕೆ., ಹೋರಾಟಗಾರರಾದ ಅನಿಲ್ ಮೆಲ್ವಿನ್ ರೆಗೋ, ರೋಹಿತಾಕ್ಷ, ಚಿತ್ತರಂಜನ್ ನೆಕ್ಕಿಲ್ಲಾರ್ ಮಾತನಾಡಿದರು. ಸುದ್ದೇಶ್ ಮಯ್ಯ, ಸುದೇಶ್ ಭಂಡಾರಿ, ಲಕ್ಷ್ಮೀ ನಾರಾಯಣ, ಕೃಷ್ಣ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/08/2021 07:47 pm