ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಸಾಧ್ಯ: ಸಚಿವ ಕೋಟ

ಮಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿ, ನಿರ್ಲಕ್ಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ, ಇಂತಹ ಉಪೇಕ್ಷಿತ ವರ್ಗದವರಿಗೆ ಆತ್ಮಸ್ಥೈರ್ಯ, ಅವಕಾಶ, ಸಾಮಾಜಿಕ ನ್ಯಾಯಗಳನ್ನು ಒದಗಿಸಬಲ್ಲ , ಮುಖ್ಯವಾಹಿನಿಗೆ ತರಬಲ್ಲ ಇಲಾಖೆಯೊಂದು ರಾಜ್ಯದಲ್ಲಿದ್ದರೆ ಅದು ಸಮಾಜ ಕಲ್ಯಾಣ ಇಲಾಖೆ ಎಂದು ಸಚಿವ ಕೋಟಿ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಕೊಡಿಯಾಲ್ ಬೈಲ್ ನಲ್ಲಿರುವ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಂತಹ ಮುಖ್ಯ ಇಲಾಖೆಯನ್ನು ಪಕ್ಷದ ಮುಖಂಡರು ನನಗೆ ನೀಡಿ ವಿಶೇಷವಾದ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದನ್ನು ಸಮರ್ಪಕವಾಗಿ ನಿಭಾಯಿಸಬಲ್ಲೆ ಎಂದು ಹೇಳಿದರು.

ಸಾಮಾನ್ಯ ಬಡವರಿಗೆ ಮನೆ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಅನುದಾನ 1.75 ಸಾವಿರ ರೂ. ನಲ್ಲಿ ಯಾವುದೇ ಮನೆ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಅದನ್ನು ಐದು ಲಕ್ಷ ರೂ.ಗೆ ಏರಿಸಿ ಆದೇಶಿಸಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Edited By : Manjunath H D
Kshetra Samachara

Kshetra Samachara

10/08/2021 05:19 pm

Cinque Terre

8.86 K

Cinque Terre

2

ಸಂಬಂಧಿತ ಸುದ್ದಿ